ರಾಷ್ಟ್ರಪತಿ ಕಚೇರಿ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ರಾಜಕೀಯ ಕಿತ್ತಾಟ!

masthmagaa.com:

ತಮಿಳುನಾಡಿನಲ್ಲಿ ಸರ್ಕಾರ ಹಾಗೂ ಗವರ್ನರ್‌ ನಡುವಿನ ಜಂಗೀಕುಸ್ತಿ ತಾರಕ್ಕೇರಿದೆ. ಗವರ್ನರ್‌, ಆರ್‌. ಎನ್‌ ರವಿ ವಿರುದ್ಧ ಪ್ರತಿಭಟನೆಗಳು ಹೆಚ್ಚಾಗ್ತಿವೆ. ಇದ್ರ ಬೆನ್ನಲ್ಲೇ ಸಿಎಂ ಎಂ.ಕೆ ಸ್ಟಾಲಿನ್‌ ರಾಷ್ಟ್ರಪತಿ ದ್ರೌಪದಿ ಮುರ್ಮು ಅವ್ರಿಗೆ ಪತ್ರ ಬರೆದಿದ್ದಾರೆ. ರಾಜ್ಯಪಾಲ ರವಿ ಅವ್ರು ತಮಿಳುನಾಡು ಸರ್ಕಾರದ ಜೊತೆಗೆ ರಾಜಕೀಯವಾಗಿ ಸೈದ್ದಾಂತಿಕ ಸಂಘರ್ಷದಲ್ಲಿ ತೊಡಗಿದ್ದಾರೆ. ಅವ್ರಿಗೆ ಆ ರೀತಿ ನಡೆದುಕೊಳ್ಳದಂತೆ ಸಲಹೆ ನೀಡ್ಬೇಕು ಅಂತ ಪತ್ರದಲ್ಲಿ ತಿಳಿಸಿದ್ದಾರೆ. ಹಾಗೂ ವಿಧಾನಸಭೆಯಲ್ಲಿ ರವಿ ಅವ್ರ ನಡವಳಿಕೆ ಸಭೆಯ ಸಂಪ್ರದಾಯಕ್ಕೆ ವಿರುದ್ಧ.. ಗವರ್ನರ್‌ ಅವ್ರ ಕಚೇರಿ ರಾಜ್ಯದ ಉನ್ನತ ಹುದ್ದೆ..ಈ ಹುದ್ದೆಯಲ್ಲಿರೋರು ರಾಜಕೀಯದಿಂದ ದೂರವಿರಬೇಕು. ಆದ್ರೆ ರವಿ ಅವ್ರು ತಮಿಳುನಾಡು ಸರ್ಕಾರದ ಜೊತೆಗೆ ರಾಜಕೀಯ ಸಂಘರ್ಷ ಇಟ್ಟುಕೊಂಡಿದ್ದಾರೆ ಅಂತ ರಾಷ್ಟ್ರಪತಿ ಅವ್ರಿಗೆ ಬರೆದಿರೋ ಪತ್ರದಲ್ಲಿ ಸ್ಟಾಲಿನ್‌ ಆರೋಪಿಸಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ತಮಿಳುನಾಡಿಗೆ ತಮಿಳಗಂ ಸೂಕ್ತವಾದ ಹೆಸರು ಅಂತ ಹೇಳೋ ಮೂಲಕ ಗವರ್ನರ್‌ ರವಿ ಅವ್ರು ಅಲ್ಲಿನ ಸರ್ಕಾರದ ವಿರೋಧ ಕಟ್ಟಿಕೊಂಡಿದ್ದಾರೆ. ಅಷ್ಟೆ ಅಲ್ದೇ ವಿಧಾನಸಭೆಯ ಭಾಷಣದಲ್ಲಿ ಸರ್ಕಾರ ನೀಡಿದ್ದ ಕೆಲವು ವಿಚಾರಗಳನ್ನ ಬಿಟ್ಟಿದ್ದ ರವಿ.. ಸಭೆಯ ಮಧ್ಯದಲ್ಲಿಯೇ ಹೊರಗೆ ನಡೆದಿದ್ರು. ಇವೆಲ್ಲ ಕಾರಣಗಳಿಂದ ತಮಿಳುನಾಡಿನಾದ್ಯಂತ ಗೆಟ್‌ ಔಟ್‌ ರವಿ ಅಂತ ಪ್ರತಿಭಟನೆಗಳು ಭುಗಿಲೆದ್ದಿವೆ.

-masthmagaa.com

Contact Us for Advertisement

Leave a Reply