ಫೇಸ್‌ಬುಕ್‌ ಲೈವ್‌ ಹತ್ಯೆ! ಮತ್ತೆ ಶಿವಸೇನಾ ಮುಖಂಡನ ಮೇಲೆ ದಾಳಿ!

masthmagaa.com:

ಮಹರಾಷ್ಟ್ರದಲ್ಲಿ ಭೀಕರ ಹತ್ಯೆಯಾಗಿದೆ. ಫೇಸ್‌ಬುಕ್‌ ಲೈವ್‌ ವೇಳೆ ಮಾರಿಸ್‌ ನೊರೊನ್ಹಾ ಅನ್ನೋ ವ್ಯಕ್ತಿಯೊಬ್ಬ ಶಿವಸೇನಾ ಮುಖಂಡ ಅಭಿಷೇಕ್‌ ಘೋಸಾಲ್ಕರ್‌ಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ನಂತ್ರ ತನಗೆ ತಾನೇ ಗುಂಡು ಹಾರಿಸ್ಕೊಂಡು ಸಾವನ್ನಪ್ಪಿದ್ದಾನೆ. ಮುಂಬೈನ ದಹಿಸರ್‌ನಲ್ಲಿ ಈ ಘಟನೆ ನಡೆದಿದ್ದು ಫೇಸ್‌ಬುಕ್‌ನಲ್ಲಿ ಲೈವ್‌ ಸ್ಟ್ರೀಮ್‌ ಆಗಿದೆ. ಇತ್ತೀಚೆಗೆ ಇವ್ರಿಬ್ರ ನಡುವೆ ಅದ್ಯಾವ್ದೋ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದನ್ನ ಪ್ಯಾಚ್‌ ಅಪ್‌ ಮಾಡೋಕೆ ಅಂತೇಳಿ, ಮಾರಿಸ್‌ ನೊರೊನ್ಹಾ ಅಭಿಷೇಕ್‌ ಘೋಸಾಲ್ಕರ್‌ ಅವ್ರನ್ನ ತಮ್ಮ ಆಫೀಸ್‌ಗೆ ಇನ್ವೈಟ್‌ ಮಾಡಿದ್ನಂತೆ. ಈ ವೇಳೆ ಫೇಸ್‌ಬುಕ್‌ ಲೈವ್‌ ಇಟ್ಟು, ಮಾರಿಸ್‌ ನೊರೊನ್ಹಾ ಈ ರೀತಿ ಮಾಡಿದ್ದಾನೆ. ಸದ್ಯ ಈ ರೀತಿ ಮಾಡೋಕೆ ಕಾರಣವೇನು ಅನ್ನೋದು ಮಾತ್ರ ಕ್ಲಿಯರ್‌ ಆಗಿಲ್ಲ. ಇನ್ನು ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರ ಬಿಜೆಪಿ ಶಾಸಕ ಗನ್ಪತ್‌ ಗಾಯಕ್ವಾಡ್‌, ಇದೇ ರೀತಿ ಶಿವ ಸೇನಾ ನಾಯಕ ಮಹೇಶ್‌ ಗಾಯಕ್ವಾಡ್‌ ಅನ್ನೋರಿಗೆ ಗುಂಡು ಹಾರಿಸಿದ್ರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಅದೇ ತರಹದ ಘಟನೆ ನಡೆದಿದೆ.

-masthmagaa.com

Contact Us for Advertisement

Leave a Reply