ಬಾಬ್ರಿ ಮಸೀದಿ ಕುರಿತು ಕಳವಳ ವ್ಯಕ್ತಪಡಿಸಿದ ಅಸಾದುದ್ದೀನ್‌ ಓವೈಸಿ!

masthmagaa.com:

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನ ಸಮೀಪಿಸುತ್ತಿರೋ ಟೈಮಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಚಟುವಟಿಕೆಗಳ ಬಗ್ಗೆ ಎಚ್ಚರದಿಂದಿರಬೇಕು ಅಂತ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮುಸ್ಲಿಂ ಯುವಕರಿಗೆ ಮನವಿ ಮಾಡಿದ್ದಾರೆ. ಬಾಬ್ರಿ ಮಸೀದಿಯನ್ನು ಉಲ್ಲೇಖಿಸಿ ಮಾತನಾಡಿರೋ ಓವೈಸಿ, ಕಳೆದ 500 ವರ್ಷಗಳಿಂದ ಪವಿತ್ರ ಖುರಾನ್ ಪಠಣ ನಡೀತಿದ್ದ ಸ್ಥಳ ಈಗ ನಮ್ಮ ಕೈಯಲ್ಲಿಲ್ಲ. ನಾವ್‌ ಈಗಾಗ್ಲೇ ನಮ್ಮ ಬಾಬ್ರಿ ಮಸೀದಿಯನ್ನ ಕಳ್ಕೊಂಡಿದ್ದೀವಿ. ಈಗ ಅಲ್ಲಿ ಏನು ಮಾಡಲಾಗ್ತಿದೆ ಅಂತ ನೀವೂ ನೋಡ್ತಿದ್ದೀರಿ. ನಿಮ್ಮ ಹೃದಯದಲ್ಲಿ ನೋವು ಇಲ್ಲವೇ? ಅಂತ ಮುಸ್ಲಿಂ ಯುವಕರಿಗೆ ಪ್ರಶ್ನಿಸಿದ್ದಾರೆ. ಇನ್ನು ದೆಹಲಿಯ ಸುನ್ಹೇರಿ ಮಸೀದಿ ಅಂದ್ರೆ ಗೋಲ್ಡನ್‌ ಮಸೀದಿ ಸೇರಿದಂತೆ 4 ಮಸೀದಿಗಳ ಮೇಲೆ ಷಡ್ಯಂತ್ರ ನಡೀತಿದೆ. ನಿಮ್ಮ ಬೆಂಬಲ ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳಿ. ಈ ಮಸೀದಿಗಳನ್ನು ನಮ್ಮಿಂದ ಕಸಿದುಕೊಳ್ಳೋ ಸಾಧ್ಯತೆ ಇದೆ. ನೀವೆಲ್ರೂ ಇದ್ರ ಬಗ್ಗೆ ಗಮನಹರಿಸಬೇಕು ಅಂತ ಮುಸ್ಲಿಂ ಯುವಕರಿಗೆ ಓವೈಸಿ ಕರೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply