ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ!

masthmagaa.com:

ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಮತ್ತೊಂದು ಚಿನ್ನದ ಪದಕವನ್ನ ತನ್ನದಾಗಿಸಿಕೊಂಡಿದೆ. ಭಾರತದ ತ್ರಿವಳಿ ಶೂಟರ್‌ಗಳಾದ ಮನು ಭಾಕರ್, ಇಷಾ ಸಿಂಗ್ ಮತ್ತು ರಿದಂ ಸಂಗ್ವಾನ್ ಅವರು ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಜೊತೆಗೆ 50 ಮೀಟರ್‌ ಏರ್‌ ರೈಫಲ್‌ ತಂಡ ಬೆಳ್ಳಿ ಪದಕ ಗೆದ್ದಿದೆ. ಇದ್ರೊಂದಿಗೆ ಮೆಡಲ್‌ ಪಟ್ಟಿಯಲ್ಲಿ 5 ಚಿನ್ನದ ಪದಕ, 5 ಬೆಳ್ಳಿ ಪದಕ ಮತ್ತು 10 ಕಂಚಿನ ಪದಕಗಳು ಸೇರಿ ಒಟ್ಟು 20 ಮೆಡಲ್‌ಗಳೊಂದಿಗೆ ಭಾರತ 6ನೇ ಸ್ಥಾನದಲ್ಲಿದೆ. ಇತ್ತ ಏಷ್ಯನ್‌ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ನೇಪಾಳ ಕ್ರಿಕೆಟ್‌ ಟೀಮ್‌ ಒಂದೇ ಪಂದ್ಯದಲ್ಲಿ 3 ವಿಶ್ವ ದಾಖಲೆ ಬರೆದಿದೆ. ನೇಪಾಳದ ಬ್ಯಾಟರ್‌ ದೀಪೇಂದ್ರ ಸಿಂಗ್‌ ಐರೆ, ಕೇವಲ 9 ಬಾಲ್‌ಗಳಲ್ಲಿ ಭರ್ಜರಿ ಅರ್ಧ ಶತಕ ಸಿಡಿಸಿದ್ದು, ಯುವರಾಜ್‌ ಸಿಂಗ್‌ ಅವರ ದಾಖಲೆಯನ್ನ ಬ್ರೇಕ್‌ ಮಾಡಿದ್ದಾರೆ. ಜೊತೆಗೆ ಕುಶಾಲ್‌ ಮಲ್ಲ ಕೇವಲ 34 ಬಾಲ್‌ಗಳಲ್ಲಿ ಶತಕ ಸಿಡಿಸುವ ಮೂಲಕ ಡೇವಿಡ್‌ ಮಿಲ್ಲರ್‌, ರೋಹಿತ್‌ ಶರ್ಮಾ ಅವರ ಹೆಸರಲ್ಲಿದ್ದ ರೆಕಾರ್ಡ್‌ ಬ್ರೇಕ್‌ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ. ಇದಷ್ಟೆ ಅಲ್ದೆ 20 ಓವರ್‌ಗಳಲ್ಲಿ 314 ರನ್‌ ಗಳಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

-masthmagaa.com

Contact Us for Advertisement

Leave a Reply