ISS ಬದಲಿಗೆ ಹೊಸ ಸ್ಪೇಸ್‌ ಸ್ಟೇಷನ್‌ ಸಜ್ಜು! ನಡೀತು ಯಶಸ್ವಿ ಟೆಸ್ಟ್‌!

masthmagaa.com:

ಸಿಯೆರಾ ಸ್ಪೇಸ್‌ (Sierra Space) ಅನ್ನೋ ಸ್ಪೇಸ್‌ ಟೆಕ್ನಾಲಜಿ ಸಂಸ್ಥೆ ಇದೀಗ ತನ್ನ ಪೂರ್ಣ ಪ್ರಮಾಣದ ಸ್ಪೇಸ್‌ ಸ್ಟೇಷನ್‌ ಮಾಡ್ಯುಲ್‌ ಅಥ್ವಾ ಮಾದರಿಯನ್ನ ಟೆಸ್ಟ್‌ ಮಾಡಿದೆ. ದೊಡ್ಡ ಬಲೂನ್‌ ತರ ಇರೋ ಸ್ಪೇಸ್‌ ಸ್ಟೇಷನ್‌ ಮಾಡ್ಯುಲ್‌ನ ರಫ್‌ ವರ್ಷನ್‌ನ್ನ ಸ್ಪೋಟಿಸಿ ಟೆಸ್ಟ್‌ ಮಾಡಲಾಗಿದೆ. ಈ ಟೆಸ್ಟ್‌ನಲ್ಲಿ 164 ಡೈನಮೈಟ್‌, ಸಿಡಿಮದ್ದುಗಳಿಗೆ ಸಮನಾದ ನಿಯಂತ್ರಿತ ಸ್ಫೋಟ ಒಳಗೊಂಡಿತ್ತು ಅಂತ ಸಂಸ್ಥೆ ಹೇಳಿದೆ. ನಾಸಾದ ISS ಅಥ್ವಾ ಇಂಟರ್‌ನ್ಯಾಷನಲ್‌ ಸ್ಪೇಸ್‌ ಸ್ಟೇಷನ್‌ ರಿಪ್ಲೇಸ್‌ ಮಾಡೋ ಉದ್ದೇಶದೊಂದಿಗೆ ಈ ಮಹತ್ತರವಾದ ಟೆಸ್ಟ್‌ ಮಾಡಲಾಗಿದೆ. ಯಾಕಂದ್ರೆ 2030ರಲ್ಲಿ ISS ತನ್ನ ಕೆಲಸವನ್ನ ಮುಗಿಸಿ ನಿವೃತ್ತಿ ಹೊಂದಲಿದೆ. ಅದ್ರಿಂದ ISS ಜಾಗ ತುಂಬೋಕೆ ಇದೀಗ ಸಿಯೆರಾ ಸ್ಪೇಸ್‌ ಈ ನೂತನ ಮಾಡ್ಯುಲ್‌ನ್ನ ಸಿದ್ಧಪಡಿಸಿದೆ. ಈ ಮಾಡ್ಯುಲ್‌ ಎಷ್ಟು ಒತ್ತಡವನ್ನ ಸಹಿಸಿಕೊಳ್ಳುತ್ತೆ ಅಂತ ಟೆಸ್ಟ್‌ ಮಾಡೋಕೆ ಈ ಪರೀಕ್ಷೆ ನಡೆಸಲಾಗಿದೆ.

-masthmagaa.com

Contact Us for Advertisement

Leave a Reply