ಈ ಬಾರಿಯ IPLನ 2 ಪಂದ್ಯಗಳ ದಿನಾಂಕದಲ್ಲಿ ಬದಲಾವಣೆ!

masthmagaa.com:

ಸದ್ಯ ನಡಿತಿರೊ IPLನ ಎರಡು ಪಂದ್ಯಗಳ ವೇಳಾ ಪಟ್ಟಿಯನ್ನ ಬಿಸಿಸಿಐ ಮರು ನಿಗದಿ ಪಡಿಸಿದೆ. ಏಪ್ರಿಲ್‌ 17ರಂದು ರಾಜಸ್ತಾನ ಹಾಗೂ ಕೆಕೆಆರ್‌ ಮಧ್ಯೆ ಕೊಲ್ಕತ್ತಾದಲ್ಲಿ ನಿಗದಿಯಾಗಿದ್ದ ಪಂದ್ಯವನ್ನ ಒಂದು ದಿನ ಮುಂಚೆ ಅಂದ್ರೆ ಏಪ್ರಿಲ್‌ 16ಕ್ಕೆ ಮರು ನಿಗದಿ ಪಡಿಸಲಾಗಿದೆ. ಹೀಗಾಗಿ ಏಪ್ರಿಲ್‌ 16ರಂದು ಅಹ್ಮದಾಬಾದ್‌ನಲ್ಲಿ ನಿಗದಿಯಾಗಿದ್ದ ದಿಲ್ಲಿ ಕ್ಯಾಪಿಟಲ್‌ ಮತ್ತು ಗುಜರಾತ್‌ ಟೈಟಾನ್ಸ್‌ ನಡುವಿನ ಪಂದ್ಯವನ್ನ ಏಪ್ರಿಲ್‌ 17ಕ್ಕೆ ಮುಂದೂಡಲಾಗಿದೆ. ಅಂದ್ಹಾಗೆ ಏಪ್ರಿಲ್‌ 19ರಂದು ಕೊಲ್ಕತ್ತಾದಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಭದ್ರತಾ ಹಿತದೃಷ್ಟಿಯಿಂದ ಬಿಸಿಸಿಐ ಈ ಬದಲಾವಣೆ ಮಾಡಿದೆ ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply