ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಸುಪ್ರೀಂಕೋರ್ಟ್‌ನಲ್ಲಿ ನಾಳೆ ವಿಚಾರಣೆ

masthmagaa.com:

ಬೆಳಗಾವಿ ಗಡಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಹೋರಾಡೋಕೆ ರಾಜ್ಯ ಸರ್ಕಾರ ಸರ್ವಸನ್ನದ್ದವಾಗಿದೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 18 ವರ್ಷಗಳ ಬಳಿಕ ಬೆಳಗಾವಿ ಗಡಿ ವಿವಾದದ ಬಗ್ಗೆ ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಇದರ ಹಿನ್ನಲೆಯಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ನಿನ್ನೆಯಷ್ಟೇ ಉನ್ನತ ಮಟ್ಟದ ಸಭೆ ನಡೆಸಿದ್ರು. ಇದರ ಬೆನ್ನಲ್ಲೇ ಮಾತಾಡಿದ ಬೊಮ್ಮಾಯಿ, ʻರಾಜ್ಯದ ಪರ ತೀರ್ಪು ಬರುವಂತೆ ನಮ್ಮ ವಕೀಲರ ತಂಡವನ್ನ ಸಿದ್ದಗೊಳಿಸಲಾಗಿದೆ. ತಂಡದಲ್ಲಿ ಹಿರಿಯ ವಕೀಲರಾದ ಮುಕುಲ್‌ ರೋಹಟಗಿ, ಶ್ಯಾಮ್‌ ದಿವಾನ್‌, ಉದಯ್‌ ಹೊಳ್ಳಾ, ಮಾರುತಿ ಜಿರ್ಲೆ ಇದ್ದಾರೆ. ಇವರ ಜೊತೆ ನಾಳೆ ಅಂದ್ರೆ ಬುಧವಾರ ಬೆಳಿಗ್ಗೆ ವಿಡಿಯೋ ಸಭೆ ನಡೆಸಲಾಗುತ್ತೆʼ ಅಂತ ಹೇಳಿದ್ದಾರೆ. ಇತ್ತ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ಸಿಎಂ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವೀಸ್‌ರನ್ನ ಒಳಗೊಂಡ ನಿಯೋಗ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಅವ್ರನ್ನ ಶೀಘ್ರದಲ್ಲೇ ಭೇಟಿಯಾಗಲಿದೆ ಅಂತ ಗೊತ್ತಾಗಿದೆ. ಇತ್ತ ಈಗಾಗಲೇ ಮಹಾರಾಷ್ಟ್ರ ಗಡಿ ವಿವಾದದ ಕುರಿತು ಚರ್ಚೆ ಮಾಡೋಕೆ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಸರ್ವಪಕ್ಷಗಳ ಸಭೆ ಕರೆದು, ಚರ್ಚೆ ನಡೆಸಬೇಕು ಅಂತ ಆಗ್ರಹಿಸಿದ್ದಾರೆ. ಅಂದ್ಹಾಗೆ ಮಹಾಜನ್ ವರದಿಯನ್ನು ತಿರಸ್ಕರಿಸಿದ್ದ ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಆ ಕುರಿತು ನಾಳೆ ವಿಚಾರಣೆ ನಡೆಯಲಿದೆ.

-masthmagaa.com

Contact Us for Advertisement

Leave a Reply