ಬೆಂಗಳೂರು: ಗ್ರಾಹಕರೇ ಎಚ್ಚರ, ನಾಳೆ ಆಟೋ ಸೇವೆ ಇರಲ್ಲ

masthmagaa.com:

ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿ ನಿಷೇಧಿಸುವಂತೆ ಆಗ್ರಹಿಸಿ ಮಾರ್ಚ್‌ 20ರಂದು ಅಂದ್ರೆ ನಾಳೆ ಆಟೋ ಸಂಚಾರ ಸ್ಥಗಿತಗೊಳಿಸೋದಾಗಿ, ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಹೇಳಿದೆ. ಸಾರಿಗೆ ಇಲಾಖೆ ಮತ್ತು ಸಾರಿಗೆ ಸಚಿವರ ಕುಮ್ಮಕ್ಕಿನಿಂದ ಬೆಂಗಳೂರಿನಲ್ಲಿ ಕಳೆದ 2 ವರ್ಷಗಳಿಂದ ಆ್ಯಪ್‌ ಆಧಾರಿತ ಅನಧಿಕೃತ ಬೈಕ್‌ ಟ್ಯಾಕ್ಸಿಗಳ ಹಾವಳಿ ಹೆಚ್ಚಾಗಿದೆ. ಇದ್ರಿಂದ ಆಟೋ ಚಾಲಕರ ಸಂಪಾದನೆಯನ್ನ ಹಗಲು ದರೋಡೆ ಮಾಡಲಾಗ್ತಿದೆ. ಆಟೋ ಚಾಲಕರ ಭವಿಷ್ಯಕ್ಕೆ ಮಾರಕವಾಗಿರೊ ಈ ಯೋಜನೆಗೆ ಸರ್ಕಾರವೇ ಬೆಂಬಲ ನೀಡ್ತಿದೆ ಅಂತ ಆಟೋ ಚಾಲಕರ ಒಕ್ಕೂಟ ಆರೋಪಿಸಿದೆ. ಜೊತೆಗೆ ದಿಲ್ಲಿ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಈ ಬೈಕ್‌ ಟ್ಯಾಕ್ಸಿಗಳನ್ನ ಈಗಾಗಲೇ ಬಹಿಷ್ಕರಿಸಲಾಗಿದೆ. ಚುನಾವಣೆಗೂ ಮುನ್ನ ಇದನ್ನ ನಿಯಂತ್ರಿಸದಿದ್ರೆ, ಚುನಾವಣೆಯನ್ನೇ ಬಹಿಷ್ಕಾರ ಮಾಡಲಾಗುತ್ತೆ. ಇಂದು ಸಂಜೆ ಸಿಎಂ ಬೈಕ್‌ ಟ್ಯಾಕ್ಸಿ ಸೇವೆ ರದ್ದು ಮಾಡದಿದ್ರೆ ಸೋಮವಾರ ಆಟೋ ಸೇವೆ ಬಂದ್‌ ಮಾಡುವುದು ನಿಶ್ಚಿತ ಅಂತ ವಾರ್ನಿಂಗ್‌ ನೀಡಲಾಗಿದೆ. ಅಂದ್ಹಾಗೆ ಬೆಂಗಳೂರಿನಲ್ಲಿ 21 ಆಟೋ ಚಾಲಕರ ಸಂಘಟನೆಗಳಿದ್ದು, ಸುಮಾರು 2.1 ಲಕ್ಷ ಆಟೋಗಳಿವೆ. ಅಂದ್ಹಾಗೆ ಈ ಆಟೋ ಚಾಲಕರು ಮತ್ತು ರ‍್ಯಾಪಿಡೋ ಬೈಕ್‌ ಟ್ಯಾಕ್ಸಿ ನಡುವಿನ ವ್ಯಾಜ್ಯದ ಬಗ್ಗೆ ಈಗಾಗಲೇ ನಾವು ವರದಿ ಮಾಡಿದೀವಿ. ನೀವದನ್ನ ಚೆಕ್‌ ಮಾಡ್ಬಹುದು.

-masthmagaa.com

Contact Us for Advertisement

Leave a Reply