ಮಗನನ್ನ ಕೊಂದು ಬ್ಯಾಗ್‌ನಲ್ಲಿ ಸಾಗಿಸ್ತಿದ್ದ ಮಹಿಳೆಯ ಬಂಧನ!

masthmagaa.com:

ತನ್ನ ನಾಲ್ಕು ವರ್ಷದ ಮಗನನ್ನ ಕೊಲೆ ಮಾಡಿ, ಮೃತದೇಹವನ್ನ ಬ್ಯಾಗ್‌ನಲ್ಲಿಟ್ಟು ಕಾರ್‌ನಲ್ಲಿ ಸಾಗಾಟ ಮಾಡ್ತಿದ್ದ ಬೆಂಗಳೂರು ಮೂಲದ ಮಹಿಳೆಯೊಬ್ರನ್ನ ಬಂಧಿಸಲಾಗಿದೆ. ʻಮೈಂಡ್‌ಫುಲ್‌ AI ಲ್ಯಾಬ್‌ʼ ಅನ್ನೋ AI ಕಂಪನಿ ಸಿಇಒ ಹಾಗೂ ಸಹ ಸಂಸ್ಥಾಪಕಿ ಸುಚನಾ ಸೇಠ್ ಈ ʻಮೈಂಡ್‌ಲೆಸ್‌ʼ ಕೆಲಸ ಮಾಡಿದ್ದಾರೆ.‌ 39 ವರ್ಷದ ಈಕೆ ಜನವರಿ 6 ರಂದು ತನ್ನ 4 ವರ್ಷದ ಮಗು ಕರ್ಕೊಂಡು ಗೋವಾದ ಹೋಟೆಲ್‌ ಒಂದಕ್ಕೆ ಹೋಗಿದ್ರು. ಅದೇ ಹೋಟೆಲ್‌ ರೂಂನಲ್ಲಿ ತನ್ನ ಮಗುವನ್ನ ಕೊಂದಿದ್ದಾರೆ. ಎರಡು ದಿನ ಆದ್ಮೇಲೆ ಜನವರಿ 8 ರಂದು ಮಗುವಿನ ಮೃತದೇಹವನ್ನ ಸೂಟ್‌ಕೇಸ್‌ನಲ್ಲಿ ಇಟ್ಕೊಂಡು ರೂಂ ಖಾಲಿ ಮಾಡಿ, ಟ್ಯಾಕ್ಸಿಯಲ್ಲಿ ವಾಪಾಸ್‌ ಬೆಂಗಳೂರಿನ ಕಡೆಗೆ ಹೊರಟಿದ್ದಾರೆ. ಅಲ್ಲಾ ಇವ್ರು ಬರ್ಬೇಕಾದ್ರೆ ಮಗು ಕರ್ಕೊಂಡ್‌ ಬಂದ್ರು, ಈಗ ಒಬ್ರೆ ಹೋಗ್ತಿದ್ದಾರೆ ಅಂತ ಹೊಟೇಲ್‌ ಸಿಬ್ಬಂದಿಗೆ ಡೌಟ್‌ ಬಂದಿದೆ. ಇವ್ರನ್ನ ಕೇಳ್ದಾಗ ಮಗುನ ಸಂಬಂಧಿಕರ ಮನೇಲ್‌ ಬಿಟ್ಟಿದ್ದೀನಿ ಅಂದಿದ್ದಾರೆ. ಆದ್ರೆ ರೂಂ ಚೆಕ್‌ ಮಾಡ್ದಾಗ, ಅಲ್ಲಿ ರಕ್ತದ ಕಲೆಗಳಿರೋದನ್ನ ನೋಡಿ ಪೊಲೀಸರಿಗೆ ಇನ್ಫಾರ್ಮ್‌ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಮಹಿಳೆ ಹೋಗ್ತಿದ್ದ ಟ್ಯಾಕ್ಸಿ ಚಾಲಕನ ಜೊತೆ ಕೊಂಕಣಿ ಭಾಷೆಲಿ ಮಾತನಾಡಿ, ಆಕೆಯನ್ನ ತಮಗೆ ಒಪ್ಪಿಸೋಕೆ ಸೂಚನೆ ನೀಡಿದ್ದಾರೆ. ಈ ವೇಳೆ ಟ್ಯಾಕ್ಸಿ ಚಿತ್ರದುರ್ಗದಿಂದ ಹಿರಿಯೂರು ಕಡೆಗೆ ಸಾಗ್ತಿತ್ತು. ಪೊಲೀಸರ ಸೂಚನೆಯಂತೆ ಚಾಲಕ ನೆಟ್ಟಗೆ ಅಲ್ಲಿನ ಐಮಂಗಲ ಪೊಲೀಸ್‌ ಸ್ಟೇಷನ್‌ಗೆ ಟ್ಯಾಕ್ಸಿ ತಂದು ನಿಲ್ಲಿಸಿದ್ದಾನೆ. ಈ ವೇಳೆ ಕಾರಿನ ಡಿಕ್ಕಿ ಓಪನ್‌ ಮಾಡಿ ನೋಡಿದಾಗ, ಸೂಟ್‌ ಕೇಸ್‌ನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಮಹಿಳೆಯನ್ನ ಅರೆಸ್ಟ್‌ ಮಾಡಲಾಗಿದೆ. ಅಂದ್ಹಾಗೆ ಈ ವಿಚಿತ್ರ ಪ್ರಕರಣದ ಹಿನ್ನೆಲೆ ಇನ್ನೂ ಕಠೋರವಾಗಿದೆ. ಅಷ್ಟಕ್ಕೂ ಈಕೆ ತನ್ನ ಮಗನನ್ನೇ ಕೊಂದಿದ್ಯಾಕೆ ಗೊತ್ತಾ? ಸುಚಾನಾ ಸೇಠ್‌ ಹಾಗೂ ಅವ್ರ ಪತಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ರು. ಡಿವೋರ್ಸ್‌ ಅಂತಿಮ ಹಂತಕ್ಕೆ ಬಂದಿದ್ದು, ಕೋರ್ಟ್‌ ಇವ್ರ ಪತಿಗೆ, ಪ್ರತಿ ಭಾನುವಾರ ಅವ್ರ ಮಗನನ್ನ ಭೇಟಿ ಮಾಡೋಕೆ ಪರ್ಮಿಷನ್‌ ಕೊಟ್ಟಿತ್ತು. ಇದು ಈಕೆಗೆ ಇಷ್ಟ ಇರ್ಲಿಲ್ವಂತೆ. ಅದ್ರಿಂದ್ಲೆ ಈಕೆ ಮಗುವನ್ನ ಕೊಂದಿರ್ಬೋದು ಅಂತ ಪೊಲೀಸರು ಶಂಕಿಸಿದ್ದಾರೆ. ಕೋರ್ಟ್‌ ಆರ್ಡರ್‌ ಚೆಕ್‌ ಮಾಡಿ ತನಿಖೆ ಮುಗಿದ್ಮೇಲೆ ಹೆಚ್ಚಿನ ಮಾಹಿತಿ ಸಿಗತ್ತೆ ಅಂತ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply