ಬಿಹಾರ್‌ನಲ್ಲಿ ಸೇತುವೆ ಕುಸಿತ! ಓರ್ವ ಸಾವು, ಸಿಲುಕಿದ 10 ಕಾರ್ಮಿಕರು!

masthmagaa.com:

ನಿರ್ಮಾಣ ಹಂತದಲ್ಲಿರೋ ಸೇತುವೆ ಕುಸಿದು ಓರ್ವ ವ್ಯಕ್ತಿ ಮೃತಪಟ್ಟು, 9 ಮಂದಿ ಗಾಯಗೊಂಡಿರೋ ಘಟನೆ ಬಿಹಾರ್‌ನ ಸುಪಾಲ್‌ ಜಿಲ್ಲೆಯಲ್ಲಿ ನಡೆದಿದೆ. ಈ ವೇಳೆ 10 ಮಂದಿ ಕಾರ್ಮಿಕರು ಕುಸಿದ ಸೇತುವೆಯ ಅವಶೇಷದ ಒಳಗೆ ಸಿಲುಕಿಕೊಂಡಿದ್ದಾರೆ. ಹೀಗಂತ ಬಿಹಾರ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಮಾರು 10.2 ಕಿಮೀ ಉದ್ದದ ಈ ಸೇತುವೆಯನ್ನ ಭಾರತದ ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಡ್ತಿದೆ.

-masthmagaa.com

Contact Us for Advertisement

Leave a Reply