ಟಾಪ್‌ ಶ್ರೀಮಂತ ಬಿಲ್‌ಗೇಟ್ಸ್‌ಗೆ ನೋಟಿಸ್‌ ಜಾರಿ ಮಾಡಿದ ಮದ್ರಾಸ್‌ ಹೈ ಕೋರ್ಟ್‌!

masthmagaa.com:

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್‌ ಮತ್ತು ಲಸಿಕಾ ತಯಾರಿಕಾ ಕಂಪನಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಬಾಂಬೆ ಹೈಕೋರ್ಟ್ ನೋಟಿಸ್ ಜಾರಿಮಾಡಿದೆ. ದಿಲೀಪ್ ಲುನಾವತ್ ಎಂಬುವವರ ಪುತ್ರಿ, ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ಮೇಲೆ ಸಾವೀಗೀಡಾಗಿದ್ರು. ಕೊರೊನಾ ವ್ಯಾಕ್ಸಿನ್ ಸೈಡ್ ಎಫೆಕ್ಟ್ಸ್ ನಿಂದ​ ತಮ್ಮ ಮಗಳ ಸಾವು ಸಂಭವಿಸಿದೆ ಅಂತ ದಿಲೀಪ್ ಆರೋಪಿಸಿದ್ರು. ಅಲ್ಲದೇ ಇದಕ್ಕೆ 1000 ಕೋಟಿ ರೂಪಾಯಿ ಪರಿಹಾರ ನೀಡಬೇಕು ಅಂತ ಬಾಂಬೈ ಹೈಕೋರ್ಟ್ಗೆ ಮನವಿ ಕೂಡ ಸಲ್ಲಿಸಿದ್ರು.​ ಇದರ ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್ ಇವರಿಬ್ಬರಿಗೂ ನೋಟಿಸ್ ಜಾರಿ ಮಾಡಿದೆ. ಅಂದ್ಹಾಗೆ ಭಾರತ ಸೇರಿದಂತೆ ಇನ್ನುಳಿದ ದೇಶಗಳಲ್ಲಿ 100 ಮಿಲಿಯನ್‌ ಲಸಿಕೆ ಉತ್ಪಾದನೆಗೆ ಅಂತ 2020ರಲ್ಲಿ ಸೀರಂ ಜೊತೆಗೆ ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್‌ ಪಾರ್ಟನರ್​ಶಿಪ್ ಮಾಡಿಕೊಂಡಿತ್ತು. ದಿಲೀಪ್ ಲುನಾವತ್ ಉಪನ್ಯಾಸಕಿಯಾಗಿದ್ದ ಮಗಳಿಗೆ ಸುರಕ್ಷಿತ ಅಂತ ಲಸಿಕೆ ನೀಡಲಾಗಿದೆ. ಅದರಿಂದಲೇ ಅವರ ಸಾವು ಆಗಿದೆ ಅಂತ ಆರೋಪಿಸಿ ಕೇಸ್‌ ಕೊಟ್ಟಿದ್ರು.

-masthmagaa.com

Contact Us for Advertisement

Leave a Reply