ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಬಹಿಷ್ಕಾರ ಮಾಡಿ ಎಂದ ಬಿಜೆಪಿ! ಕಾರಣವೇನು?

masthmagaa.com:

ಕತಾರ್‌ನಲ್ಲಿ ನಡಿತಿರೋ ಫಿಫಾ ವಿಶ್ವಕಪ್‌ ಅನ್ನು ಬಹಿಷ್ಕಾರ ಮಾಡಿ ಅಂತ ಗೋವಾ ಬಿಜೆಪಿ ವಕ್ತಾರ ಸಾವಿಯೋ ರೋಡ್ರಿಗಸ್‌ ಕರೆ ನೀಡಿದ್ದಾರೆ. ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು, ಅಕ್ರಮ ಹಣ ವರ್ಗಾವಣೆ ಸೇರಿ ಹಲವು ಕೇಸ್‌ಗಳಲ್ಲಿ ಭಾರತಕ್ಕೆ ಬೇಕಿರೋ ಮೋಸ್ಟ್‌ ವಾಂಟೆಡ್‌ ಝಾಕಿರ್‌ ನಾಯ್ಕ್‌ನನ್ನ ಫಿಫಾ ಅತಿಥಿಯಾಗಿ ಆಹ್ವಾನಿಸಿದೆ. ಕತಾರ್‌ನ ಈ ನಡೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಜಗತ್ತು ಭಯೋತ್ಪಾದನೆ ವಿರುದ್ಧ ಹೋರಾಟ ಮಾಡ್ತಿರೋ ಟೈಮ್‌ನಲ್ಲಿ ಉಗ್ರರ ಪರ ಇರೋ ವ್ಯಕ್ತಿಯನ್ನ ಕರೆಸಿ ದ್ವೇಷ ಹರಡಲಾಗ್ತಿದೆ ಅಂತ ರೋಡ್ರಿಗಸ್‌ ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ವಿಶ್ವಕಪ್‌ ಅನ್ನು ಬಹಿಷ್ಕಾರ ಮಾಡ್ಬೇಕು ಅಂತ ಭಾರತೀಯರಿಗೆ ಹಾಗೂ ಭಯೋತ್ಪಾದನೆಯಿಂದ ತೊಂದ್ರೆ ಅನುಭವಿಸ್ತಿರೋ ದೇಶದ ಜನರಿಗೆ ನಾನು ಮನವಿ ಮಾಡ್ತೀನಿ ಅಂತ ರೋಡ್ರಿಗಸ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply