ಮೋದಿ ಪಕ್ಷಪಾತಿ: ರಾಹುಲ್‌ ಹೇಳಿಕೆ ವಿರುದ್ಧ ಬಿಜೆಪಿ ದೂರು

masthmagaa.com:

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ತಮಿಳುನಾಡಿನ ಕೊಯಂಬತೂರ್‌ನಲ್ಲಿ ಪ್ರಚಾರದ ವೇಳೆ ರಾಹುಲ್‌, ಜನರಲ್ಲಿ ಭಾಷೆ ಹಾಗೂ ಸಂಸ್ಕೃತಿ ಆಧಾರದಲ್ಲಿ ಒಡಕೊ ಮೂಡೋ ಮಾತುಗಳನ್ನಾಡಿದ್ದಾರೆ ಅಂತ ಬಿಜೆಪಿ ಆರೋಪಿಸಿದೆ. ʻಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದಲ್ಲಿ ಒಂದೇ ಭಾಷೆ ಇರ್ಬೇಕು ಅನ್ನೋ ನಿಲುವಲ್ಲಿದ್ದಾರೆ. ಆ ಮೂಲಕ ಅವರು ತಮಿಳು ಭಾಷೆಗೆ ವಿರುದ್ಧವಾಗಿದ್ದಾರೆʼ ಅಂತ ರಾಹುಲ್‌ ಹೇಳಿಕೆ ನೀಡಿದ್ರು. ಇದರ ವಿರುದ್ಧ ದೂರು ಸಲ್ಲಿಸಿರೋ ಬಿಜೆಪಿ, ʻರಾಹುಲ್‌ ಗಾಂಧಿ ಪಿಎಂ ಮೋದಿ ತಮಿಳಿಗರ ವಿರುದ್ಧ ಇದಾರೆ ಅನ್ನೋ ತರ ಹೇಳಿಕೆ ನೀಡಿ, ಸುಳ್ಳು ಹಾಗೂ ಆಧಾರರಹಿತ ಆರೋಪ ಮಾಡಿದ್ದಾರೆ. ಆ ಮೂಲಕ ಪಿಎಂ ಮೋದಿಯವ್ರ ವಿಶ್ವಾಸಾರ್ಹತೆಗೆ ಧಕ್ಕೆ ತಂದಿರೋದ್ರ ಜೊತೆಗೆ, ಜನರಲ್ಲಿ ಅವರ ವಿರುದ್ಧ ಪಕ್ಷಪಾತದ ಭಾವನೆ ಬರೋ ತರ ಮಾಡಿದ್ದಾರೆʼ ಅಂತೇಳಿದೆ. ಅತ್ತ ಮಹಾರಾಷ್ಟ್ರದ ಶಿವಸೇನೆ(UBT) ಪಕ್ಷ ತನ್ನ ನೂತನ ಚಿಹ್ನೆ ಬಿಡುಗಡೆ ಮಾಡಿದೆ. ಉದ್ಧವ್‌ ಠಾಕ್ರೆ ನೇತೃತ್ವದ ಪಕ್ಷ ʻಉರಿಯುವ ಜ್ಯೋತಿʼ ಚಿಹ್ನೆಯನ್ನ ಅಡಪ್ಟ್‌ ಮಾಡ್ಕೊಂಡಿದೆ.

-masthmagaa.com

Contact Us for Advertisement

Leave a Reply