ನಿದ್ರೆ ಮಾಡೋದು ಮಾನವನ ಹಕ್ಕೆಂದ ಬಾಂಬೆ ಹೈಕೋರ್ಟ್‌!

masthmagaa.com:

ನಿದ್ರೆ ಮಾಡೋದು ಎಷ್ಟು ಮುಖ್ಯ ಅನ್ನೋದ್ರ ಬಗ್ಗೆ ಇದೀಗ ಬಾಂಬೆ ಹೈಕೋರ್ಟ್‌ ಪಾಠ ಮಾಡಿದೆ. ನಿದ್ರೆ ಮಾಡೋದು ಮನುಷ್ಯನ ಬೇಸಿಕ್‌ ಹಕ್ಕು…ಇದಕ್ಕೆ ತಡೆ ಮಾಡಿದ್ರೆ ಒಬ್ಬ ವ್ಯಕ್ತಿಯ ಮಾನವ ಹಕ್ಕುಗಳನ್ನ ಉಲ್ಲಂಘಿಸಿದಂತಾಗುತ್ತೆ ಅಂತ ಬಾಂಬೆ ಹೈಕೋರ್ಟ್‌ ಹೇಳಿದೆ. 64 ವರ್ಷದ ವ್ಯಕ್ತಿಯೊಬ್ರು ತಮ್ಮ ಬಂಧನ ಕಾನೂನುಬಾಹಿರ ಅಂತೇಳಿ ಬಾಂಬೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ರು. ಈ ವೇಳೆ ವಕೀಲರು ED ಅಧಿಕಾರಿಗಳು ವಿಚಾರಣೆ ನಡೆಸಿರೋ ರಿಪೋರ್ಟ್‌ನ್ನ ಕೋರ್ಟ್‌ಗೆ ಸಬ್‌ಮಿಟ್‌ ಮಾಡಿದ್ದಾರೆ. ಇದ್ರಲ್ಲಿ ಅರ್ಜಿ ಸಲ್ಲಿಸಿರೋ ವ್ಯಕ್ತಿಯನ್ನ ED ಅಧಿಕಾರಿಗಳು ರಾತ್ರಿ 3 ಗಂಟೆವರೆಗೆ ವಿಚಾರಣೆ ನಡೆಸಿರೋದು ನ್ಯಾಯಧೀಶರ ಗಮನಕ್ಕೆ ಬಂದಿದೆ. ಈ ಸಂಬಂಧ ರಿಯಾಕ್ಟ್‌ ಮಾಡಿರೋ ಕೋರ್ಟ್‌, ʻಈ ರೀತಿ ಮಧ್ಯರಾತ್ರಿ ವೇಳೆ ತನಿಖೆ ನಡೆಸಿ ಸ್ಟೇಟ್‌ಮೆಂಟ್‌ ಪಡೆದು…ಅವ್ರ ನಿದ್ರೆಗೆ ಅಡ್ಡಿ ಮಾಡೋದು ಸರಿಯಲ್ಲ. ಇದ್ರಿಂದ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಇದು ಮಾನವ ಹಕ್ಕುಗಳ ಉಲ್ಲಂಘನೆ. ಕೋರ್ಟ್‌ ಈ ಅಭ್ಯಾಸವನ್ನ ಒಪ್ಪಲ್ಲ. ಸೋ ಯಾವ್ದೇ ರೀತಿ ಸ್ಟೇಟ್‌ಮೆಂಟ್‌ ರೆಕಾರ್ಡ್‌ ಮಾಡ್ಬೇಕಿದ್ರು ಎಲ್ಲರಿಗೂ ಸರಿಹೊಂದೋ ಟೈಮ್‌ ಮೆಂಟೇನ್‌ ಮಾಡಿʼ ಅಂತ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸಿದೆ.

-masthmagaa.com

Contact Us for Advertisement

Leave a Reply