ಹಲಾಲ್‌ ಸರ್ಟಿಫಿಕೇಟ್‌ ಪಡೆಯಲು ಕೇಂದ್ರದಿಂದ ಹೊಸ ನಿಯಮ! ಏನದು?

masthmagaa.com:

ಹಲಾಲ್‌ ಉತ್ಪನ್ನಗಳಿಗೆ ಬೇಡಿಕೆಯಿರೊ ವಿದೇಶಗಳಿಗೆ ರಫ್ತಾಗುವ ಮಾಂಸ ಉತ್ಪನ್ನಗಳಿಗೆ ಹಲಾಲ್‌ ಸರ್ಟಿಫಿಕೇಟನ್‌ನ್ನ ಸರ್ಕಾರ ಸೂಚಿತ ಕೇಂದ್ರಗಳಿದಂಲೇ ಪಡೆಯಬೇಕು ಅಂತ ಸೂಚಿಸಲಾಗಿದೆ. ಕ್ವಾಲಿಟಿ ಕೌನ್ಸಿಲ್‌ ಆಫ್‌ ಇಂಡಿಯಾ ಮಂಡಳಿಯ ಅಕ್ರೆಡಿಶನ್‌ ಪಡೆದ ಸಂಸ್ಥೆಯಿಂದ ಪ್ರಮಾಣಪತ್ರ ಹೊಂದಿರುವ ಪ್ಯಾಕೇಜಿಂಗ್‌ ಕೇಂದ್ರಗಳಲ್ಲಿ ಮಾಂಸ ಉತ್ಪನ್ನಗಳ ಪ್ರೋಸೆಸಿಂಗ್‌ ನಡೆಸಿ ಪ್ಯಾಕ್‌ ಮಾಡಿರಬೇಕು. ಆಗ ಮಾತ್ರ ಹಲಾಲ್‌ ಸರ್ಟಿಫಿಕೇಟ್‌ ಸಿಗುತ್ತೆ ಅಂತ ಸರ್ಕಾರ ಹೇಳಿದೆ. ಈ ಹೊಸ ನಿಯಮ ಹಲಾಲ್‌ ಪಡೆಯುವ ಆಹಾರ ಉತ್ಪನ್ನಗಳಿಗೆ ಮಾತ್ರ. ಇತರ ಉತ್ಪನ್ನಗಳ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇರಲ್ಲ. ಇನ್ನು ಹಲಾಲ್‌ ಸರ್ಟಿಫಿಕೇಟ್‌ ಬೇಡದ ದೇಶಗಳಿಗೆ ಮಾಂಸ ಉತ್ಪನ್ನಗಳನ್ನ ರಫ್ತು ಮಾಡುವಾಗ ಆ ದೇಶದ ಅವಶ್ಯಕತೆಗಳಿಗೆ ತಕ್ಕಂತೆ ಗುಣಮಟ್ಟದ ಉತ್ಪನ್ನಗಳನ್ನ ಕಳಿಸಬೇಕು ಅಂತ ಸರ್ಕಾರ ಸೂಚಿಸಿದೆ. ಅಂದ್ಹಾಗೆ ಹಲವು ವಿದೇಶಗಳಲ್ಲಿ ಹಲಾಲ್‌ ಉತ್ಪನ್ನಗಳಿಗೆ ಬೇಡಿಕೆ ಇದೆ. ಆದ್ರೆ ಹಲಾಲ್‌ ಪ್ರಮಾಣಪತ್ರದಲ್ಲಿ ಭಾರತದಲ್ಲಿ ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ. ಹೀಗಾಗಿ ಇದೀಗ ಕೇಂದ್ರ ಸರ್ಕಾರ ಈ ವಿಚಾರದ ಬಗ್ಗೆ ಗಮನ ಹರಿಸಿದೆ.

-masthmagaa.com

Contact Us for Advertisement

Leave a Reply