ಚತ್ತೀಸ್‌ಗಡದಲ್ಲಿ 9 ಮಾವೋವಾದಿಗಳ ಎನ್‌ಕೌಂಟರ್‌!

masthmagaa.com:

ನಕ್ಸಲ್‌ ವಿರೋಧಿ ಕಾರ್ಯಚರಣೆಯಲ್ಲಿ ಚತ್ತೀಸ್‌ಗಢದ ಬೀಜಾಪುರ್‌ನಲ್ಲಿ ಒಟ್ಟು 9 ಮಾವೋವಾದಿಗಳನ್ನ ಹತ್ಯೆ ಮಾಡಲಾಗಿದೆ. ಏಪ್ರಿಲ್‌ 02ರ ಮುಂಜಾನೆ 6 ಗಂಟೆ ಹೊತ್ತಿಗೆ ಅಲ್ಲಿನ ಅರಣ್ಯ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯ ಜಂಟಿ ಕಾರ್ಯಚರಣೆ ವೇಳೆ ಈ ಎನ್‌ಕೌಂಟರ್‌ ಮಾಡಲಾಗಿದೆ. ಸದ್ಯ ಘಟನಾ ಸ್ಥಳದಲ್ಲಿ ಶೋಧ ಕಾರ್ಯಚರಣೆ ನಡೀತಿದೆ. ಇನ್ನು ಈ ಬೀಜಾಪುರ ನಗರವಿರೋ ಬಸ್ತರ್‌ ಪ್ರದೇಶ ಮಾವೋವಾದಿ ಚಟುವಟಿಕೆ ನಡೆಯೋ ಪ್ರಮುಖ ತಾಣವಾಗಿದೆ. ಇದೇ ವರ್ಷ ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿರೋ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಸುಮಾರು 41 ನಕ್ಸಲೀಯರ ಹತ್ಯೆ ಮಾಡಲಾಗಿದೆ.

-masthmagaa.com

Contact Us for Advertisement

Leave a Reply