ಚೀನಾ ವಿಶ್ವಸಂಸ್ಥೆಯನ್ನೇ ಹೈಜಾಕ್‌ ಮಾಡಿದೆ: UN ಮಾಜಿ ಉದ್ಯೋಗಿ

masthmagaa.com

ಚೀನಾ ಕಪಟಿ, ಕುತಂತ್ರಿ, ತನ್ನ ಕೆಲಸ ಈಡೇರೋದಕ್ಕೆ ಏನ್‌ ಬೇಕಾದ್ರು ಮಾಡಬಲ್ಲ ಗುಳ್ಳೆ ನರಿ ದೇಶ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರ. ಆದ್ರೀಗ ಸ್ವಾರ್ಥಿ ಡ್ರ್ಯಾಗನ್‌ ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳನ್ನೇ ಹೈಜಾಕ್‌ ಮಾಡ್ಕೊಂಡಿತ್ತು, ಕೋವಿಡ್‌ ಮತ್ತಿತರೆ ವಿಚಾರಗಳನ್ನ ಮುಚ್ಚಿಕ್ಕೋಕೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧ್ಯಕ್ಷರುಗಳಿಗೆ ಲಂಚ ನೀಡಿತ್ತು ಅನ್ನೋ ಸ್ಪೋಟಕ ವಿಚಾರ ಬಯಲಾಗಿದೆ. ಖುದ್ದು ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಿದ ವ್ಯಕ್ತಿಯೊಬ್ರು ಈ ಮಾಹಿತಿಯನ್ನ ಹೊರಗೆಡವಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ High Commissioner for Human Rights (OHCHR)ನ ಮಾಜಿ ಉದ್ಯೋಗಿ ಬ್ರಿಟಿಷ್‌ ಪ್ರಜೆ ಎಮ್ಮಾ ರಿಲಿ ಅನ್ನೋರು ಬ್ರಿಟನ್‌ನ ಫಾರಿನ್‌ ಅಫೇರ್ಸ್‌ ಕಮೀಟಿ ಮುಂದೆ ಈ ಗಂಭೀರ ಆರೋಪ ಮಾಡಿದ್ದಾರೆ. ʻವಿಶ್ವಸಂಸ್ಥೆಯ ರಿಪೋರ್ಟ್‌ಗಳಲ್ಲಿ ಚೀನಾ ತನ್ನ ವಿರುದ್ಧ ಮಾಡಲಾಗಿರೋ ನೆಗೆಟಿವ್‌ ಉಲ್ಲೇಖಗಳನ್ನ ತೆಗೆದುಹಾಕಲು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಒತ್ತಡ ಹಾಕ್ತಿದೆ. ಚೀನಾದ ಲ್ಯಾಬ್‌ನಿಂದ ಕೋವಿಡ್‌ ಹುಟ್ಟಿಕೊಳ್ತು ಅಂತ WHO ಮತ್ತು UNEP (ಯುನೈಟೆಡ್‌ ನೇಷನ್ಸ್‌ ಎನ್‌ವಾಯರ್ಮೆಂಟ್‌ ಪ್ರೋಗ್ರಾಮ್‌) ಮಾಡಿರೋ ರಿಪೋರ್ಟ್‌ನ್ನ ಕೂಡ ಚೀನಾ ಎಡಿಟ್‌ ಮಾಡಿಸಿದೆ. ಇನ್ನು ಉಯಿಘರ್ ಮುಸ್ಲಿಮರನ್ನ ಚೀನಾ ಯಾವ್‌ ರೀತಿ ನಡೆಸಿಕೊಳ್ತಿದೆ ಅಂತ ತೊರಿಸಿದ್ದ ರಿಪೋರ್ಟ್‌ನ್ನ ಕೂಡ ಚೀನಾ ಸರ್ಕಾರ ತಿರುಚಿದೆ.
ಅಲ್ಲದೇ ಚೀನಾದ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಹ್ಯುಮನ್‌ ರೈಟ್ಸ್‌ ಕೌನ್ಸಿಲ್‌ನಲ್ಲಿ ಮಾತಾಡೋಕೆ ಯಾವ ಆಕ್ಟಿವಿಸ್ಟ್‌ ಬರ್ತಿದ್ದಾರೆ ಅನ್ನೋ ಮಾಹಿತಿಯನ್ನ ಕೂಡ ವಿಶ್ವಸಂಸ್ಥೆ ಸಿಬ್ಬಂದಿಗಳು ಗುಪ್ತವಾಗಿ ಚೀನಾಗೆ ನೀಡ್ತಿದ್ರು. ನಂತ್ರ ಚೀನಾ ಆ ಆಕ್ಟಿವಿಸ್ಟ್‌ಗಳ ಫ್ಯಾಮಿಲಿಯವ್ರನ್ನ ಅರೆಸ್ಟ್‌ ಮಾಡಿ, ಟಾರ್ಚರ್‌ ನೀಡ್ತಿತ್ತು ಅಂತ ಹೇಳಿದ್ದಾರೆ. ಹೀಗಾಗಿ ಚೀನಾನ ಸಾರ್ವಜನಿಕವಾಗಿ ಟೀಕಿಸೋಕೆ ಎಲ್ರೂ ಹಿಂಜರೀತಿದ್ದಾರೆ ಅಂದಿದ್ದಾರೆ. ಅಷ್ಟೇ ಅಲ್ದೇ ವಿಶ್ವಸಂಸ್ಥೆಯಲ್ಲಿ ಚೀನಾ ತನ್ನ ವಿರುದ್ಧ ಕೆಲ ಸೆನ್ಸಿಟಿವ್‌ ಟಾಪಿಕ್ಸ್‌ ಬಗ್ಗೆ ಚರ್ಚೆ ನಡೀದೇ ಇರೋ ಹಾಗೇ ಮಾಡಲು ವಿಶ್ವಸಂಸ್ಥೆಯ ವೋಟಿಂಗ್‌ ಮೇಲೂ ತನ್ನ ಪ್ರಭಾವ ಬೀರಿದೆ. ಅಲ್ಲದೇ 2013-15ರಲ್ಲಿ ಸುಸ್ಥಿರ ಅಭಿವೃದ್ಧಿ SDG ಬಗ್ಗೆ ಚರ್ಚೆ ನಡೀತಿರೋವಾಗ ಚೀನಾ, ಇಬ್ಬರು UNGA ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಿಗೆ ಲಂಚ ನೀಡಿದೆ. ಹೀಗಾಗಿ UNGA ಅಸೆಂಬ್ಲಿಯ ಫೈನಲ್‌ ಟೆಕ್ಸ್ಟ್‌ನಲ್ಲಿ ಚೀನಾಗೆ ಸರಿಹೊಂದುವಂತೆ ವಿಶ್ವಸಂಸ್ಥೆ ಟಾರ್ಗೆಟ್‌ ಸೆಟ್‌ ಮಾಡಿತ್ತು ಅಂತ ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಈ ರೀತಿ ಜಾಗತಿಕ ಸಂಸ್ಥೆಗಳ ಮೇಲೆ ಪ್ರಭಾವ ಬೀರಲು ಇತ್ತೀಚಿನ ದಿನಗಳಲ್ಲಿ ಚೀನಾ ಈ ಸಂಸ್ಥೆಯ ಆಯಕಟ್ಟಿನ ಜಾಗದಲ್ಲಿ ಚೀನಾ ತನ್ನ ಜನರು ನೇಮಕವಾಗುವಂತೆ ನೋಡ್ತಿದೆ ಅಂದಿದ್ದಾರೆ.

-masthmagaa.com

Contact Us for Advertisement

Leave a Reply