ಚೀನಾದಲ್ಲಿ ಎಲಾನ್ ಮಸ್ಕ್ ವಿರುದ್ಧ ಭುಗಿಲೆದ್ದ ಆಕ್ರೋಶ!

masthmagaa.com:

ಚೀನಾ ಬಾಹ್ಯಾಕಾಶದಲ್ಲಿ ಎಲ್ಲರಿಗಿಂತ ಮುಂದೆ ನಾನೇ ಓಡ್ಬೇಕು ಅಂತ ಶತಪ್ರಯತ್ನ ನಡೆಸ್ತಿದೆ. ಅದಕ್ಕಾಗಿ ತನ್ನದೇ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮಾಡ್ತಿದೆ. ಆದ್ರೆ ಸ್ಪೇಸ್ ಎಕ್ಸ್​ ಮುಖ್ಯಸ್ಥ ಎಲಾನ್ ಮಸ್ಕ್​​ರ ಸ್ಟಾರ್​ ಲಿಂಕ್​​ನ ಉಪಗ್ರಹಗಳು ಡಿಕ್ಕಿಯಾಗೋದ್ರಿಂದ ಜಸ್ಟ್​ ಮಿಸ್ ಆಗಿದೆ ಅಂತ ಚೀನಾ ಹೇಳಿದೆ. ವಿಶ್ವಸಂಸ್ಥೆಯ ಬಾಹ್ಯಾಕಾಶ ಸಂಸ್ಥೆಗೆ ಚೀನಾ ನೀಡಿರೋ ವರದಿಯಲ್ಲಿ ಈ ಮಾಹಿತಿ ನೀಡಿದೆ. ಒಟ್ಟು ಎರಡು ಸಲ.. ಒಂದು ಜುಲೈ 1, ಎರಡನೇದು ಅಕ್ಟೋಬರ್ 21ರಂದು ಡಿಕ್ಕಿಯಾಗೋ ಅಪಾಯ ಎದುರಾಗಿತ್ತು. ಆದ್ರೆ ನಮ್ಮ ವಿಜ್ಞಾನಿಗಳ ಸಮಯ ಪ್ರಜ್ಞೆಯಿಂದ ಈ ಅಪಾಯ ತಪ್ಪಿದೆ ಅಂತ ಕೂಡ ಹೇಳಿದೆ. ಇದ್ರ ಬೆನ್ನಲ್ಲೇ ಚೀನಾದಲ್ಲಿ ಉದ್ಯಮಿ ಎಲಾನ್ ಮಸ್ಕ್ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ. ಆದ್ರೆ ಈ ಬಗ್ಗೆ ಇನ್ನೂ ಪರಿಶೀಲನೆ ನಡೆಸಿಲ್ಲ. ಈ ರೀತಿ ನಡೆದಿರೋದು ಹೌದಾ ಅಲ್ವಾ ಅನ್ನೋದು ತನಿಖೆಯಿಂದಷ್ಟೇ ಗೊತ್ತಾಗಲಿದೆ. ಆದ್ರೆ ಸ್ಪೇಸ್​​ಎಕ್ಸ್​ ಅಥವಾ ಎಲಾನ್ ಮಸ್ಕ್ ಆಗಲೀ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೋಷಿಯಲ್ ಮೀಡಿಯಾ ವೇಬೋದಲ್ಲಿ ಜನ ಬಗೆಬಗೆಯ ಕಮೆಂಟ್ ಮಾಡ್ತಿದ್ದು, ಒಬ್ಬ ವ್ಯಕ್ತಿಯಂತೂ ಸ್ಟಾರ್ ಲಿಂಕ್ ಉಪಗ್ರಹಗಳು ಬರೀ ಕಸ ಅಷ್ಟೆ ಅಂತ ಹೇಳಿದ್ದಾರೆ. ಮತ್ತೊಬ್ಬರು ಈ ಉಪಗ್ರಹಗಳು ಬಾಹ್ಯಾಕಾಶದಲ್ಲಿರೋ ಅಮೆರಿಕದ ಶಸ್ತ್ರಾಸ್ತ್ರ ಅಂತ ಹೇಳಿದ್ದಾರೆ. ನಾವು ಟೆಸ್ಲಾ ಕಾರು ತಗೊಂಡು ಮಸ್ಕ್​​​ಗೆ ಸ್ಟಾರ್​ಲಿಂಕ್​ ಉಪಗ್ರಹ ಉಡಾವಣೆಗೆ ದುಡ್ಡು ಕೊಡ್ತೀವಿ. ಆದ್ರೆ ಮಸ್ಕ್ ಚೀನಾ ಸ್ಪೇಸ್ ಸ್ಟೇಷನ್​​ಗೇ ಡಿಕ್ಕಿಯಾಗಲು ಪ್ರಯತ್ನಿಸ್ತಾರೆ ಅಂತ ಬರೆದಿದ್ರೆ, ಮತ್ತೊಬ್ಬರು ಟೆಸ್ಲಾವನ್ನು ಬಾಯ್​​ಕಾಟ್ ಮಾಡಕ್ಕೆ ರೆಡಿಯಾಗಿ ಅಂತ ಬರ್ಕೊಂಡಿದ್ದಾರೆ. ಅಂದಹಾಗೆ ಚೀನಾ ನಿರ್ಮಿಸ್ತಿರೋ ಈ ಸ್ಪೇಸ್​​ ಸ್ಟೇಷನ್​​ನ ಕೋರ್ ಈ ವರ್ಷ ಆರಂಭದಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ಇದ್ರ ನಿರ್ಮಾಣ ಕಾರ್ಯ 2022ರಲ್ಲಿ ಪೂರ್ಣಗೊಳಿಸೋ ಗುರಿಯನ್ನು ಚೀನಾ ಹೊಂದಿದೆ.

-masthmagaa.com

Contact Us for Advertisement

Leave a Reply