ಕಲುಷಿತ ನೀರು ದುರ್ಘಟನೆ: ಜಿಲ್ಲಾ ಪಂಚಾಯತ್‌ CEO ಹೊಣೆ ಮಾಡ್ಬೇಕಾಗುತ್ತೆ, ಸಿದ್ದರಾಮಯ್ಯ ಎಚ್ಚರಿಕೆ

masthmagaa.com:

ಕಲುಷಿತ ನೀರು ಕುಡಿದು ಕೊಪ್ಪಳದಲ್ಲಿ ಮೂವರು ಸಾವನ್ನಪ್ಪಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಸಭೆ ನಡೆಸಿ ತನಿಖೆಗೆ ಆದೇಶಿಸಿದ್ದಾರೆ. ಕೊಪ್ಪಳ ಜಿಲ್ಲೆ ಸೇರಿ ಎಲ್ಲೆಲ್ಲಿ ಕಲುಷಿತ ನೀರು ಕುಡಿದು ಜನರ ಆರೋಗ್ಯ ಮತ್ತು ಜೀವಕ್ಕೆ ಸಮಸ್ಯೆ ಆಗಿದೆಯೋ ಆ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳ ಈ ಸಭೆಯಲ್ಲಿ ಮಾತಾಡಿರೋ ಸಿಎಂ, ಮೊದಲ ಅನಾಹುತ ಸಂಭವಿಸಿದಾಗಲೇ ಏಕೆ ಎಚ್ಚೆತ್ತುಕೊಳ್ಳಲಿಲ್ಲ? ಮತ್ತೆ ಘಟನೆ ಮರುಕಳಿಸಿದೆ. ನೀವು ಏನ್ ಮಾಡ್ತಾ ಇದೀರಿ? ಮತ್ತೊಂದು ಪ್ರಕರಣ ಸಂಭವಿಸಿದರೆ ಜಿಲ್ಲಾ ಪಂಚಾಯತ್ CEOಗಳನ್ನೇ ಹೊಣೆ ಮಾಡಿ, ಅಮಾನತು ಮಾಡಲಾಗುವುದು ಅಂತ ಎಚ್ಚರಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply