4ನೇ ಅಲೆ ಭೀತಿ: ಬಂತು ಚಿಕ್ಕ ಮಕ್ಕಳಿಗೂ ಕೊರೋನ ಲಸಿಕೆ

masthmagaa.com:

ದೇಶದಲ್ಲಿ 4ನೇ ಅಲೆ ಬರುತ್ತೆ ಅಂತ ಹೆದರುತ್ತಾ ಇರುವ ಹೊತ್ತಲ್ಲೆ ಜನರಿಗೆ ಒಂದು ಸುಹಿಸುದ್ದಿ ಸಿಕ್ಕಿದೆ. ಏನಂದ್ರೆ ಡ್ರಗ್ಸ್‌ ಕಂಟ್ರೋಲರ್‌ ಜೆನೆರಲ್‌ ಆಫ್‌ ಇಂಡಿಯಾ (DCGI) ಮಕ್ಕಳ 3 ಕೊರೋನಾ ಲಸಿಕೆಗಳಿಗೆ ಗ್ರೀನ್‌ಸಿಗ್ನಲ್‌ ಕೊಟ್ಟಿದೆ. ಒಂದು 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ತುರ್ತುಬಳಕೆಯ ಸಲುವಾಗಿ ಕೋವ್ಯಾಕ್ಸಿನ್‌ ಲಸಿಕೆ. ಎರಡನೇಯದು 5 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕಾರ್ಬೆವ್ಯಾಕ್ಸ್‌ ಲಸಿಕೆಯನ್ನ ಕೊಡಬಹುದು ಅಂತ ಹೇಳಿದೆ. ಇನ್ನು 12 ರಿಂದ 14 ವರ್ಷ ಮೇಲ್ಪಟ್ಟವರಿಗೆ ಝೈಕೋವ್‌ಡಿ ಲಸಿಕೆಯನ್ನ ಕೊಡಬಹುದು ಅಂತ ಹೇಳಿದೆ. ಕೋವ್ಯಾಕ್ಸಿನ್‌ ಅನ್ನ ಭಾರತ್‌ ಭಯೋಟೆಕ್‌ ಕಂಪನಿ, ಕಾರ್ಬೆವ್ಯಾಕ್ಸ್‌ ಲಸಿಕೆಯನ್ನ ಹೂಸ್ಟನ್‌ನಲ್ಲಿರುವ ಟೆಕ್ಸಾಸ್‌ ಚಿಲ್ಡ್ರನ್ಸ್‌ ಹಾಸ್ಪಿಟಲ್‌ ಸೆಂಟರ್‌ ಫಾರ್‌ ವ್ಯಾಕ್ಸಿನ್‌ ಡೆವಲೋಪ್‌ಮೆಂಟ್‌ ಆಂಡ್‌ ಬೇಲರ್‌ ಕಾಲೇಜ್‌ ಆಫ್‌ ಮೆಡಿಸಿನ್‌, ಝೈಕೋವ್‌ಡಿಯನ್ನ ಭಾರತೀಯ ಔಷಧೀಯ ಕಂಪನಿ ಕ್ಯಾಡಿಲಾ ಹೆಲ್ತ್‌ಕೇರ್‌ ಅಭಿವೃದ್ದಿ ಪಡಿಸಿದೆ.

-masthmagaa.com

Contact Us for Advertisement

Leave a Reply