ದುರ್ಬಲಗೊಂಡ ಮಿಚಾಂಗ್‌ ಚಂಡಮಾರುತ: ಚೆನ್ನೈ ಜನತೆ ನಿಟ್ಟುಸಿರು

masthmagaa.com:

ಎರಡು ದಿನಗಳಿಂದ ಪೂರ್ವ ಕರಾವಳಿಯನ್ನು ಜಾಲಾಡಿಸಿದ ಮಿಚಾಂಗ್‌ ಚಂಡಮಾರುತ ಬುಧವಾರ ಅಂದ್ರೆ ಇಂದು ತೆಲಂಗಾಣದ ಕಡೆಗೆ ಸಾಗುತ್ತಲೇ ದುರ್ಬಲಗೊಂಡಿದೆ. ಎರಡು ದಿನಗಳಲ್ಲಿ 46 ಸೆಂಟಿಮೀಟರ್‌ ಮಳೆ ಕಂಡು ಕಂಗಾಲಾಗಿದ್ದ ಚೆನ್ನೈ ಜನತೆಗೆ ರಿಲೀಫ್‌ ಸಿಕ್ಕಿದೆ. ಅದ್ರೂ ಅಲ್ಲಲ್ಲಿ ಇನ್ನೂ ನೀರು ನಿಂತಿದೆ. ಇದ್ರಿಂದ ಸಂಪರ್ಕ ಕಳೆದುಕೊಂಡಿರೋ ಪ್ರದೇಶಗಳಿಗೆ ಸೇನಾ ಹೆಲಿಕಾಪ್ಟರ್‌ಗಳ ಮೂಲಕ ಆಹಾರ ಸರಬರಾಜು ಮಾಡ್ಲಾಗ್ತಿದೆ. ಇನ್ನು ವಿಪರೀತ ಮಳೆಗೆ ಇದುವರೆಗೆ 16 ಮಂದಿ ಬಲಿಯಾಗಿ ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೈಕ್ಲೋನ್‌ನಿಂದ ಉಂಟಾದ ಹಾನಿ ಬಗ್ಗೆ ಕಳವಳ ವ್ಯಕ್ತಪಡಿಸಿ Xನಲ್ಲಿ ಪೋಸ್ಟ್‌ ಹಾಕಿದ್ದಾರೆ. ʻಮಿಚಾಂಗ್‌ ಚಂಡಮಾರುತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡೋರ ಜೊತೆಗೆ ನನ್ನ ಪ್ರಾರ್ಥನೆ ಇದೆ. ಪರಿಸ್ಥಿತಿ ನಾರ್ಮಲ್‌ ಆಗೋವರೆಗೂ ಅಧಿಕಾರಿಗಳು ಗ್ರೌಂಡ್‌ನಲ್ಲಿದ್ದು ಬಿಡುವಿಲ್ಲದಂತೆ ಕೆಲಸ ಮಾಡಲಿದ್ದಾರೆʼ ಅಂತ ಮೋದಿ ಹೇಳಿದ್ದಾರೆ. ಇನ್ನು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್‌ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಅವಶ್ಯಕ ವಸ್ತುಗಳ ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ 5060 ಕೋಟಿ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಪಡೆದಿದ್ದಾರೆ.

-masthmagaa.com

Contact Us for Advertisement

Leave a Reply