ಮೂರನೇ ದಿನಕ್ಕೆ ರೈತರ ಹೋರಾಟ: ಮೂರು ಸುತ್ತಿನ ಮಾತುಕತೆ

masthmagaa.com:

ದೆಹಲಿಯಲ್ಲಿ ರೈತರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರವೂ ದೆಹಲಿಗೆ ನುಗ್ಗೋಕೆ ರೈತರ ಪ್ರಯತ್ನಗಳು, ಅವರನ್ನ ಹತ್ತಿಕ್ಕೋಕೆ ಪೊಲೀಸರ ಹರಸಾಹಸ ಮುಂದುವರೆದಿದೆ. ಅತ್ತ ಪಂಜಾಬ್‌ನಲ್ಲಿ 200 ರೈತರು ರೈಲು ತಡೆ ಅಭಿಯಾನ ಶುರು ಮಾಡಿದ್ದಾರೆ. ಮೂರು ಕೃಷಿ ಬಿಲ್‌ ವಿರುದ್ಧ 13 ತಿಂಗಳು ಪ್ರತಿಭಟನೆ ನಡೆಸಿದ್ದ ಸಂಯುಕ್ತ ಕಿಸಾನ್‌ ಮೋರ್ಚಾ ಈ ಪ್ರತಿಭಟನೆಗೆ ಕೈಜೋಡಿಸಬೇಕು ಅಂತ ಇತರ ಸಂಘಟನೆಗಳು ಕರೆ ಕೊಡ್ಡಿವೆ. ಸಂಯುಕ್ತ ಕಿಸಾನ್‌ ಮೋರ್ಚಾ ಫೆಬ್ರವರಿ 16ರ ಬಂದ್‌ಗೆ ಕರೆ ಕೊಟ್ಟಿತ್ತು. ಆದ್ರೆ ಆನ್‌ ಗ್ರೌಂಡ್‌ ಪ್ರತಿಭಟನೆಗೆ ಇನ್ನೂ ಎಂಟ್ರಿ ಕೊಟ್ಟಿಲ್ಲ. ಇನ್ನು ಗುರುವಾರ ಸಂಜೆ ಅಧಿಕಾರಿಗಳೊಂದಿಗೆ ಮೂರನೇ ಸುತ್ತಿನ ಮಾತುಕತೆ ನಡೆಸೋಕೆ ರೈತರು ಒಪ್ಪಿದ್ದಾರೆ. ಮೂವರು ಕೇಂದ್ರ ಸಚಿವರು ಚಂಡೀಗಢದಲ್ಲಿ ರೈತ ಮುಖಂಡರ ಜೊತೆ ಮಾತನಾಡಲಿದ್ದಾರೆ.

-masthmagaa.com

Contact Us for Advertisement

Leave a Reply