ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಆಗಸ್ಟ್‌ 8ಕ್ಕೆ ನಿಗದಿ!

masthmagaa.com:

ಮಣಿಪುರದ ಹಿಂಸಾಚಾರ ಕುರಿತು ಪ್ರಧಾನಿ ಮೋದಿಯವರು ಹೇಳಿಕೆ ನೀಡ್ಬೇಕು ಅಂತೇಳಿ ವಿಪಕ್ಷಗಳು ಪಟ್ಟು ಹಿಡಿದು, ಈಗಾಗಲೇ ಅವಿಶ್ವಾಸ ನಿರ್ಣಯ ಮಂಡಿಸಿವೆ. ಇದೀಗ ಲೋಕಸಭೆಯಲ್ಲಿ ಆಗಸ್ಟ್ 8ರಂದು ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. ಅದಾದ ನಂತರ ಅಂದ್ರೆ ಆಗಸ್ಟ್ 10ರಂದು ಮೋದಿ ಮಾತನಾಡಲಿದ್ದಾರೆ ಅಂತ ಲೋಕಸಭೆಯ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದ್ರೆ ವಿಪಕ್ಷ ನಾಯಕರು ಇದಕ್ಕೆ ಒಪ್ಪಿಲ್ಲ. ಆದಷ್ಟು ಬೇಗ ಮೋದಿಯವರು ಹೇಳಿಕೆ ಕೊಡ್ಬೇಕು ಅಂತ ಒತ್ತಾಯಿಸಿದ್ದು, ಸಭೆಯಿಂದ ಹೊರನಡೆದಿದ್ದಾರೆ. ಇತ್ತ ಮಣಿಪುರ ಹಿಂಸಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಸದಸ್ಯರು ಸಂಸತ್ತಿನಲ್ಲಿ ತಮ್ಮ ಪ್ರತಿಭಟನೆಯನ್ನ ಮುಂದುವರೆಸಿದ್ದಾರೆ. ಕಲಾಪ ಆರಂಭವಾಗುತ್ತಿದ್ದಂತೆಯೇ, ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದ್ದಾರೆ. ಫಲಕಗಳನ್ನು ಹಿಡಿದು ಕೆಲವರು ಸದನದ ಬಾವಿಗೆ ಪ್ರವೇಶಿಸಿ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

-masthmagaa.com

Contact Us for Advertisement

Leave a Reply