ಪ್ರತಿಭಟನೆಗೆ ತಾತ್ಕಾಲಿಕ ಬ್ರೇಕ್‌! ರೈತರ ಮುಂದಿನ ಪ್ಲಾನ್‌?

masthmagaa.com:

ʻದೆಹಲಿ ಚಲೋʼ ರೈತರ ಪ್ರತಿಭಟನೆಯಲ್ಲಿ ಯುವ ರೈತನೊಬ್ಬ ಮೃತಪಟ್ಟ ನಂತ್ರ ಪ್ರತಿಭಟನೆಯನ್ನ ಸ್ಟಾಪ್‌ ಮಾಡಿ ಎರಡು ದಿನದೊಳಗೆ ಅಪ್ಡೇಟ್‌ ನೀಡ್ತೀವಿ ಅಂತ ರೈತರು ಹೇಳಿದ್ರು. ಇದೀಗ ರೈತರು ಫೆಬ್ರುವರಿ 29ರವರೆಗೆ ಪ್ರತಿಭಟನೆಯನ್ನ ನಿಲ್ಲಿಸೋದಾಗಿ ತಿಳಿಸಿದ್ದಾರೆ. ಆದ್ರೆ ನಮ್ಮ ಮುಂದಿನ ಆ್ಯಕ್ಷನ್‌ ಏನಿರಲಿದೆ ಅಂತ ಡಿಸೈಡ್‌ ಮಾಡೋವರೆಗೂ ನಾವು ಪಂಜಾಬ್‌-ಹರಿಯಾಣ ಗಡಿಯಲ್ಲೇ ಇರ್ತೀವಿ ಅಂದಿದ್ದಾರೆ. ಈ ರೀತಿ ರೈತಮುಖಂಡ ಸರ್ವನ್‌ ಸಿಂಗ್‌ ಪಂಢೇರ್‌ ಫೆಬ್ರುವರಿ 23ರಂದು ಮಾಹಿತಿ ಕೊಟ್ಟಿದ್ದಾರೆ. ಇನ್ನು ಈ ಅವಧಿಯಲ್ಲಿ ಅಂದ್ರೆ ಫೆಬ್ರುವರಿ 29ರವರೆಗೆ ರೈತರು ಪ್ರತಿಭಟನೆ ಭಾಗವಾಗಿ ಹಲವು ಕಾರ್ಯಕ್ರಮಗಳನ್ನ ಕೈಗೊಳ್ಳೋದಾಗಿ ಹೇಳಿದ್ದಾರೆ. ಫೆಬ್ರುವರಿ 24 ರಂದು ಮೇಣದಬತ್ತಿ ಹಿಡಿದು ಮೆರವಣಿಗೆ ಮಾಡಲಿದ್ದಾರೆ. ಫೆಬ್ರುವರಿ 25 ರಂದು ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸೆಮಿನಾರ್‌ಗಳನ್ನ ಆಯೋಜಿಸಲಾಗುತ್ತೆ. ಇನ್ನು ಫೆಬ್ರುವರಿ 26ರಂದು ಕೇಂದ್ರ ಮತ್ತು ವಿಶ್ವ ವ್ಯಾಪಾರ ಸಂಸ್ಥೆಯ ಪ್ರತಿಕೃತಿಗಳನ್ನ ಸುಟ್ಟು ಹಾಕಲಾಗುತ್ತೆ. ಹೀಗೆ ಹಲವು ಸಭೆಯನ್ನ ಮುಂದಿನ ಎರಡು ಮೂರು ದಿನಗಳಲ್ಲಿ ಆಯೋಜಿಸಲಾಗುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply