ನಮಾಜ್‌ ಮಾಡ್ತಿದ್ದ ಮುಸ್ಲಿಂರಿಗೆ ಒದ್ದ ಪೋಲಿಸ್‌ ಅಮಾನತು!

masthmagaa.com:

ಬ್ಯುಸಿ ರೋಡ್‌ ಮಧ್ಯೆನೇ ಕೂತು ನಮಾಜ್‌ ಮಾಡ್ತಿದ್ದ ಮುಸ್ಲಿಂರಿಗೆ ಪೊಲೀಸ್‌ ಸಬ್‌-ಇನ್ಸ್‌ಪೆಕ್ಟರ್‌ ಒಬ್ರು ಕಾಲಿನಿಂದ ಒದ್ದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್‌ ಆಗ್ತಿದ್ದು, ಈ ಪೊಲೀಸ್‌ ವಿರುದ್ಧ ಸಿಕ್ಕಾಪಟ್ಟೆ ಟೀಕೆ ವ್ಯಕ್ತವಾಗಿದೆ. ಸೋ ಇದೀಗ ದೆಹಲಿಯ ಈ ಪೊಲೀಸ್‌ ಸಬ್‌-ಇನ್ಸ್‌ಪೆಕ್ಟರ್‌ ಮನೋಜ್‌ ತೋಮರ್‌ನ್ನ ಕೆಲಸದಿಂದ ಅಮಾನತು ಮಾಡಲಾಗಿದೆ. ಇನ್ನು ಈ ವಿಡಿಯೋಗೆ AIMIM ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ರಿಯಾಕ್ಟ್‌ ಮಾಡಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರವನ್ನ ಟೀಕಿಸಿದ್ದಾರೆ. ʻಈ ಘಟನೆ ಎಲ್ಲರನ್ನ ಬೆಚ್ಚಿಬೀಳಿಸಿದೆ. ಮುಸ್ಲಿಂರಿಗೆ ಅದೆಷ್ಟು ಘನತೆ ಇದೆ ಹಾಗೂ ಎಷ್ಟು ಗೌರವನ್ನ ಅವ್ರಿಗೆ ನೀಡಲಾಗುತ್ತೆ ಅನ್ನೋದರ ಪ್ರತಿಬಿಂಬವಾಗಿದೆʼ ಅಂತ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply