ದೆಹಲಿ ರೈತರ ಪ್ರತಿಭಟನೆ: ಮೌನ ಮುರಿದ ಪಿಎಂ ಮೋದಿ!

masthmagaa.com:

ಕೇಂದ್ರದ ಪ್ರಸ್ತಾವನೆ ರಿಜೆಕ್ಟ್‌ ಮಾಡಿ ಮತ್ತೆ ʻದೆಹಲಿ ಚಲೋʼ ಅಭಿಯಾನ ಶುರು ಮಾಡಿದ್ದ ರೈತರು ಪಂಜಾಬ್‌ನ ಶಂಭೂ ಮತ್ತು ಖನೌರಿ ಗಡಿಭಾಗದಲ್ಲಿ ಪ್ರತಿಭಟನೆಯನ್ನ ತೀವ್ರಗೊಳಿಸಿದ್ದಾರೆ. ಪರಿಣಾಮ ಇದೀಗ ಪಂಜಾಬ್‌ನ ಯುವ ರೈತನೊಬ್ಬರು ಮೃತಪಟ್ಟಿದ್ದಾರೆ. ಬ್ಯಾರಿಕೇಡ್‌ ಚದುರಿಸಿ ನಗರಕ್ಕೆ ನುಗ್ಗೋಕೆ ಟ್ರೈ ಮಾಡ್ತಿದ್ದ ರೈತರು ಹಾಗೂ ಪೊಲೀಸರ ನಡುವೆ ಶುರುವಾದ ಸಂಘರ್ಷ… ತೀವ್ರ ಸ್ವರೂಪ ಪಡ್ಕೊಳ್ತು. ಈ ವೇಳೆ ಪಂಜಾಬ್‌ ಮೂಲದ 22 ವಯಸ್ಸಿನ ಶುಭ್‌ಕರಣ್‌ ಸಿಂಗ್‌ ಅನ್ನೋ ರೈತರೊಬ್ರು ಫೆಬ್ರುವರಿ 21 ರಂದು ಪ್ರಾಣ ಕಳೆದ್ಕೊಂಡಿದ್ದಾರೆ. ಇವರ ಸಾವಿಗೆ ಪೊಲೀಸರೇ ಕಾರಣ ಅಂತ ರೈತರು ಆರೋಪಿಸಿದ್ದಾರೆ. ಆದ್ರೆ ಪೊಲೀಸರು ಈ ಆರೋಪವನ್ನ ನಿರಾಕರಿಸಿ, ಇದೊಂದು ರೂಮರ್‌ ಅಂತ ಹೇಳಿದ್ದಾರೆ. ಅಷ್ಟೇ ಅಲ್ದೇ ಈ ಸಂಘರ್ಷದಲ್ಲಿ ಒಟ್ಟು 12 ಪೊಲೀಸ್‌ ಸಿಬ್ಬಂದಿಗೆ ಗಾಯಗಳಾಗಿದ್ವು. ಇನ್ನು ರೈತನ ಸಾವಿಗೆ ರಿಯಾಕ್ಟ್‌ ಮಾಡಿರೋ ಪಂಜಾಬ್‌ ಸಿಎಂ ಭಗವಂತ್‌ ಮನ್‌, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ತೆಗೆದ್ಕೊಳ್ಳೋದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಮೃತಪಟ್ಟ ರೈತನ ಫ್ಯಾಮಿಲಿಗೆ ಹಣಕಾಸಿನ ನೆರವು ನೀಡೋದಾಗ್ಯೂ ಹೇಳಿದ್ದಾರೆ. ಸದ್ಯ ರೈತರ ಪ್ರತಿಭಟನೆ ಸ್ಥಗಿತಗೊಂಡಿದ್ದು, ಎರಡು ದಿನಗಳ ನಂತ್ರ ಅಂದ್ರೆ ಫೆಬ್ರುವರಿ 23 ರಂದು.. ಮುಂದೆ ಏನ್‌ ಮಾಡ್ಬೇಕು ಅನ್ನೋ ಬಗ್ಗೆ ಡಿಸೈಡ್‌ ಮಾಡಲಾಗುತ್ತೆ. ಹೀಗಂತ ಪಂಜಾಬ್‌ ಕಿಸಾನ್‌ ಮಜ್ದೂರ್‌ನ ಪ್ರಧಾನ ಕಾರ್ಯದರ್ಶಿ ಅನೌನ್ಸ್‌ ಮಾಡಿದ್ದಾರೆ. ಇನ್ನು ರೈತನ ಸಾವಿಗೆ ವಿಪಕ್ಷಗಳೂ ರಿಯಾಕ್ಟ್‌ ಮಾಡಿದ್ದು, ಕೇಂದ್ರ ಸರ್ಕಾರವನ್ನ ಟೀಕಿಸಿವೆ. ರೈತರ ಪ್ರತಿಭಟನೆಗೆ ಇದೀಗ ಪ್ರಧಾನಿ ಮೋದಿಯವ್ರು ಕೊನೆಗೂ ಮೌನ ಮುರಿದಿದ್ದಾರೆ. ʻನಮ್ಮ ಸರ್ಕಾರ ರೈತರ ಕಲ್ಯಾಣಕ್ಕಾಗಿ ಅವ್ರ ಎಲ್ಲಾ ಬೇಡಿಕೆಗಳನ್ನ ಈಡೇರಿಸುವಲ್ಲಿ ಕಮಿಟ್‌ ಆಗಿದೆ. ರೈತರ ಒಳಿತಿಗಾಗಿ ಎಲ್ಲಾ ರೀತಿಯಿಂದಲೂ ಪ್ರಯತ್ನ ಪಡ್ತಿದ್ದೀವಿ. ಇದೀಗ ಕಬ್ಬಿನ ಬೆಲೆಯನ್ನ ಹಿಂದೆಂದಿಗಿಂತಲೂ ಹೆಚ್ಚು ಮಾಡಲಾಗಿದ್ದು.. ಅದಕ್ಕೆ ಅಪ್ರೂವಲ್ ಕೂಡ ನೀಡಲಾಗಿದೆ. ಇದ್ರಿಂದ ದೇಶದ ಕೋಟ್ಯಂತರ ಕಬ್ಬು ಬೆಳಗಾರರಿಗೆ ಲಾಭವಾಗಲಿದೆʼ ಅಂತ ಹೇಳಿದ್ದಾರೆ. ಇನ್ನೊಂದ್ಕಡೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅವ್ರು ಕೂಡ ರೈತರ ಸಮಸ್ಯೆ ಬಗೆಹರಿಸೋಕೆ ಮೂರು ಸದಸ್ಯರ ಹೈ ಲೆವಲ್‌ ಸಮಿತಿ ರಚಿಸಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ಕೇಂದ್ರ ಸರ್ಕಾರ ರೈತರ ಕಬ್ಬಿಗೆ ಹೊಸತಾಗಿ ಫಿಕ್ಸ್‌ ಮಾಡಿರೋ ರೇಟ್‌ ಪ್ರಕಾರ, ಪ್ರತೀ ಕ್ವಿಂಟಾಲ್‌ ಕಬ್ಬಿಗೆ 340 ರೂಪಾಯಿ FRP, ಅಂದ್ರೆ ಸಕ್ಕರೆ ಕಾರ್ಖಾನೆಗಳು ರೈತರಿಂದ ಕಬ್ಬು ಖರೀದಿಸೋವಾಗ ನೀಡುವಂತಹ ಕನಿಷ್ಠ ಬೆಲೆಯನ್ನ ಘೋಷಿಸಿದ್ದಾರೆ. ಇದನ್ನ ಆಕ್ಟೋಬರ್‌ 1, 2024 ರಿಂದ ಸೆಪ್ಟೆಂಬರ್‌ 30, 2025 ರವರೆಗೆ ಕಬ್ಬು ಬೆಳೆಯೋ ಸೀಸನ್‌ನಲ್ಲಿ ಈ ಹೊಸ ರೇಟ್‌ ಫಿಕ್ಸ್‌ ಮಾಡಲಾಗುತ್ತೆ. ಈ ಹಿಂದೆ ರೈತರ ಪ್ರತೀ ಕ್ವಿಂಟಾಲ್‌ ಕಬ್ಬಿಗೆ 315 ರೂಪಾಯಿ FRP ಇತ್ತು.

-masthmagaa.com

Contact Us for Advertisement

Leave a Reply