ದೆಹಲಿಯಲ್ಲಿ ರೈತರಿಂದ ಭಾರತ್‌ ಬಂದ್‌! ರಾಹುಲ್‌ ಭರವಸೆ!

masthmagaa.com:

ನಾಲ್ಕನೇ ದಿನಕ್ಕೆ ಕಾಲಿಟ್ಟ ದೆಹಲಿಯಲ್ಲಿ ರೈತರ ಪ್ರತಿಭಟನೆ ಇಂದು ಬಂದ್‌ ಸ್ವರೂಪ ಪಡೆದುಕೊಂಡಿದೆ. ಸಂಯುಕ್ತ ಕಿಸಾನ್‌ ಮೋರ್ಚಾ (SKM) ಜೊತೆ ಹಲವಾರು ರೈತ ಒಕ್ಕೂಟಗಳು ʻಗ್ರಾಮೀಣ್‌ ಭಾರತ್‌ ಬಂದ್‌ʼ ನಡೆಸಿವೆ. ಪರಿಣಾಮ ಪಂಜಾಬ್‌ ಮತ್ತು ಹರಿಯಾಣದ ಹೆಚ್ಚಿನ ಅಂಗಡಿ ವಹಿವಾಟು ನಿಂತು ಹೋಗಿವೆ. ರಾಷ್ಟ್ರೀಯ ಹೆದ್ದಾರಿ ತಡೆಯಲಾಗಿದೆ. ಅಲ್ಲಿನ ಬಸ್‌ ಡ್ರೈವರ್‌ಗಳು ಕೂಡ ರೈತರ ಕೈ ಜೋಡಿಸಿದ್ದಾರೆ… ಯುಪಿ, ಜಮ್ಮು-ಕಾಶ್ಮೀರದಲ್ಲು ಸ್ವಲ್ಪ ಮಟ್ಟಿಗೆ ಬಂದ್‌ ನಡೆದಿದೆ. ಈ ಎಲ್ಲದ್ರ ನಡುವೆ ಪಂಜಾಬ್‌ ಮತ್ತು ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸ್ತಿದ್ದ 70 ವರ್ಷದ ರೈತರೊಬ್ರು ಮೃತಪಟ್ಟಿರೋದು ವರದಿಯಾಗಿದೆ. ತಕ್ಷಣವೇ ಇವ್ರನ್ನ ಹತ್ತಿರದ ಆಸ್ಪತ್ರೆಗೆ ಕರ್ಕೊಂಡು ಹೋದ್ರು ಯಾವ್ದೇ ರೀತಿ ಪ್ರಯೋಜನವಾಗಿಲ್ಲ. ಅತ್ತ ಬಂದ್‌ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ʻಮುಂಬರೋ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್‌ ಅಧಿಕಾರಕ್ಕೆ ಬಂದ್ರೆ, ಖಂಡಿತವಾಗ್ಲೂ MSPಗೆ (ಕನಿಷ್ಠ ಬೆಂಬಲ ಬೆಲೆಗೆ) ಕಾನೂನು ಮಾನ್ಯತೆ ಕೊಡ್ತೀವಿʼ ಅಂತ ಮತ್ತೊಮ್ಮೆ MSP ಆಶ್ವಾಸನೆ ನೀಡಿದ್ದಾರೆ. ಅಂದ್ಹಾಗೆ ಫೆಬ್ರುವರಿ 15 ರಂದು ಅಂದ್ರೆ ನೆನ್ನೆ ಕೇಂದ್ರದ ಮೂವರು ಸಚಿವರು ಸೇರಿ ರೈತರೊಂದಿಗೆ ಒಟ್ಟು 5 ಗಂಟೆಗಳ ಕಾಲ ಮಾತುಕತೆ ನಡೆಸಿದ್ರು. ಈಗಲೂ ಕೂಡ ದೆಹಲಿ ಗಡಿಯಲ್ಲಿ ರೈತರನ್ನ ತಡೆಯೋ ಕೆಲಸ ಮುಂದುವರೆದಿದೆ.

-masthmagaa.com

Contact Us for Advertisement

Leave a Reply