ಥೈಲ್ಯಾಂಡ್​ಗೆ ಭೇಟಿ ನೀಡಿದ 10 ಕೋಟಿ ಮಂದಿಯ ದಾಖಲೆ ಲೀಕ್!

masthmagaa.com:

ಥೈಲ್ಯಾಂಡ್​​ಗೆ ಭೇಟಿ ನೀಡಿರೋ 10.6 ಕೋಟಿಗೂ ಅಧಿಕ ಪ್ರಯಾಣಿಕರ ವೈಯಕ್ತಿಕ ದಾಖಲೆ ಅನ್​ಲೈನ್​ನಲ್ಲಿ ಸೋರಿಕೆಯಾಗಿದೆ. ಬ್ರಿಟನ್ ಮೂಲದ ಕನ್ಸ್ಯೂಮರ್ ಸೆಕ್ಯೂರಿಟಿ ಕಂಪನಿ ಕಂಪ್ಯಾರಿಟೆಕ್ ಸಂಸ್ಥೆ ತನ್ನ ವರದಿಯಲ್ಲಿ ಈ ಬಗ್ಗೆ ತಿಳಿಸಿದೆ. ತನ್ನ ಸೈಬರ್ ಸೆಕ್ಯೂರಿಟಿ ರಿಸರ್ಚ್​​ನ ಮುಖ್ಯಸ್ಥ ಬಾಬ್​ ಡಿಯಾಚೆಂಕೋ ಆಗಸ್ಟ್​​ನಲ್ಲಿ ದಾಖಲೆಗಳನ್ನು ಪತ್ತೆಹಚ್ಚಿದ್ದು, ಅದ್ರಲ್ಲಿ ಥೈಲ್ಯಾಂಡ್​​ಗೆ ಹೋದ ಪ್ರಯಾಣಿಕರ ವೈಯಕ್ತಿಕ ದಾಖಲೆಗಳಿವೆ. ಹೆಸರು, ಪಾಸ್​ಪೋರ್ಟ್​ ನಂಬರ್​, ಮನೆ ವಿಳಾಸ.. ಹೀಗೆ ಕೆಲವೊಂದು ಮಾಹಿತಿಗಳು ಇದ್ರಲ್ಲಿವೆ. 2011ರಲ್ಲಿ ತಾನು ಥೈಲ್ಯಾಂಡ್​​ಗೆ ಭೇಟಿ ನೀಡಿದ್ದ ದಾಖಲೆ ಕೂಡ ಪತ್ತೆಯಾಗಿದೆ ಅಂತ ಬಾಬ್ ಡಿಯಾಚೆಂಕೋ ತಿಳಿಸಿದ್ದಾರೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಥೈಲ್ಯಾಂಡ್ ಸೈಬರ್ ಕ್ರೈಂ ಇನ್ವೆಸ್ಟಿಗೇಷನ್ ಬ್ಯೂರೋ, ಈ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಬಗ್ಗೆ ತನಿಖೆ ನಡೆಸ್ತಿದ್ದೀವಿ ಅಂತ ಹೇಳಿದ್ದಾರೆ. ಅಂದಹಾಗೆ ಥೈಲ್ಯಾಂಡ್​ನಲ್ಲಿ ಸೈಬರ್ ಸೆಕ್ಯೂರಿಟಿ ಉಲ್ಲಂಘನೆ ಮತ್ತು ದಾಖಲೆಗಳ ಸೋರಿಕೆ ಏನೂ ಹೊಸತೇನಲ್ಲ. ಈ ಹಿಂದೆಯೂ ಎಷ್ಟೋ ಸಲ ಈ ರೀತಿ ಆಗಿದೆ.

-masthmagaa.com

Contact Us for Advertisement

Leave a Reply