ಯುಕ್ರೇನ್‌ ಕೈ ಸೇರಲಿದೆ ಬ್ರಿಟನ್‌ನ ‘ಡ್ರಾಗನ್‌ ಫೈರ್‌’ ಆಯುಧ!

masthmagaa.com:

ಒಂದ್‌ ಕಡೆ ಮಿಡಲ್‌ ಈಸ್ಟ್‌ ಹತ್ತಿ ಉರೀತಿದ್ರೆ, ಮತ್ತೊಂದ್‌ ಕಡೆ ಸೋ ಕಾಲ್ಡ್‌ ಮುಂದುವರೆದ ರಾಷ್ಟ್ರಗಳು ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳೋ ಹಳೇ ಚಾಳಿಯನ್ನ ಮುಂದುವರೆಸಿವೆ. ಇದೀಗ ರಷ್ಯಾ ಜೊತೆ ಕಾದಾಡ್ತಿರೋ ಯುಕ್ರೇನ್‌ಗೆ ಬ್ರಿಟನ್‌ ʻಡ್ರಾಗನ್‌ ಫೈರ್‌ʼ ಅನ್ನೋ ಅತ್ಯಾಧುನಿಕ ಆಯುಧವನ್ನ ಕೊಡೋಕೆ ನೋಡ್ತಿದೆ. ಹೈ ಪವರ್‌ ಲೇಸರ್‌ ವೆಪನ್ನಾಗಿರೋ ಈ ʻಡ್ರ್ಯಾಗನ್‌ ಫೈರ್‌ʼ ಒಂದು ಕಿ.ಮೀ ದೂರ ಇರೋ ಒಂದು ರುಪಾಯಿ ನಾಣ್ಯವನ್ನ ನಿಖರವಾಗಿ ಹೊಡೆಯಬಲ್ಲದಂತೆ. ಅಷ್ಟು ಪ್ರಿಸೈಜ್‌ ಆಗಿ ಟಾರ್ಗೆಟ್‌ನ್ನ ಉಡಾಯಿಸುತ್ತೆ ಅಂತ ಬ್ರಿಟನ್‌ ಹೇಳ್ಕೊಂಡಿದೆ. ಇದನ್ನ ಸುಮಾರು 7 ವರ್ಷದಿಂದ ಬ್ರಿಟನ್‌ ಡೆವಲಪ್‌ ಮಾಡ್ತಿದೆ. 2027ಕ್ಕೆ ಇದು ಡೆಪ್ಲಾಯ್‌ ಆಗ್ಬೇಕಿತ್ತು. ಆದ್ರೆ ಯುಕ್ರೇನ್‌ಗೆ ನೆರವು ನೀಡೋಕೋಸ್ಕರ ಯುದ್ಧೋಪಾದಿಯಲ್ಲಿ ಇದನ್ನ ಡೆವಲಪ್‌ ಮಾಡಲಾಗ್ತಿದೆಯಂತೆ… ಯುಕ್ರೇನ್‌ ಕೈಗೆ ಈ ಆಯುಧ ಸಿಕ್ರೆ, ಸಂಪೂರ್ಣ ಯುದ್ಧದ ಚಿತ್ರಣವೇ ಬದಲಾಗುತ್ತೆ ಅಂತ ಬ್ರಿಟನ್‌ ಎಂಪಿಗಳು ಹೇಳ್ಕೊಂಡು ಅಡ್ಡಾಡ್ತಿದ್ದಾರೆ. ಅಲ್ಲದೇ ಇದ್ರಿಂದ ಯುಕ್ರೇನ್‌ ಏರಿಯಲ್‌ ಡಿಫೆನ್ಸ್‌ನ ಖರ್ಚು ಕೂಡ ಕಡಿಮೆಯಾಗುತ್ತೆ ಅಂತ ಹೇಳಲಾಗಿದೆ. ಅಮೆರಿಕದ ಇಂತಹದ್ದೇ ಪೇಟ್ರಿಯಟ್‌ ಇಂಟರ್‌ಸೆಪ್ಟರ್‌ ಮಿಸೈಲ್ಸ್‌, ಒಂದು ಬಾರಿ ಫೈರ್‌ ಆಗೋದಕ್ಕೆ 4 ಮಿಲಿಯನ್‌ ಡಾಲರ್‌ ಖರ್ಚಾದ್ರೆ, ಈ ಡ್ರ್ಯಾಗನ್‌ ಫೈರ್‌ಗೆ ಕೇವಲ 12 ಡಾಲರ್‌ ಖರ್ಚಾಗುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply