ಚೆನ್ನೈ ಬಳಿ ವಿಷಕಾರಿ ಅನಿಲ ಸೋರಿಕೆ: ಹಲವ ಜನರು ಅಸ್ವಸ್ಥ

masthmagaa.com:

ಚೆನ್ನೈ ಬಳಿಯ ಎನ್ನೋರ್‌ನ ಪ್ಯಾಕ್ಟರಿ ಒಂದ್ರಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿದ್ದು 25ಕ್ಕೂ ಹೆಚ್ಚಿನ ಜನ ಅಸ್ವಸ್ಥರಾಗಿದ್ದಾರೆ. ಮಂಗಳವಾರ ಮಧ್ಯ ರಾತ್ರಿ ಇಲ್ಲಿನ ಗೊಬ್ಬರ ಉತ್ಪಾದನ ಘಟಕವೊಂದ್ರಲ್ಲಿ ಅಮೋನಿಯ ಅನ್ನೋ ಅನಿಲ ಸೋರಿಕೆಯಾಗಿದೆ. ಕೂಡಲೆ ಅಮೋನಿಯಾದ ಕೆಟ್ಟ ವಾಸನೆ, ಫ್ಯಾಕ್ಟರಿ ಸುತ್ತ ಮುತ್ತಲ ಪ್ರದೇಶಕ್ಕೆ ಸ್ಪ್ರೆಡ್‌ ಆಗಿದೆ. ಈ ಬೆನ್ನಲ್ಲೇ ಅಲ್ಲಿದ್ದ ಜನರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅವ್ರನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಬಗ್ಗೆ ಸ್ಟೇಟ್‌ಮೆಂಟ್‌ ನೀಡಿರೋ ʻಕೋರಮಂಡಲ್ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ʼ ಅನ್ನೋ ಫ್ಯಾಕ್ಟರಿ ʻಅಮೋನಿಯಾ ಲೀಕ್‌ ಆಗ್ತಿದ್ದ ಸ್ಥಳವನ್ನ ಹುಡುಕೆ ಸೋರಿಕೆ ನಿಲ್ಲಿಸಲಾಗಿದೆ. ಘಟನೆಯಿಂದ ಆಸ್ಪತ್ರೆಗೆ ಸೇರಿದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಸಧ್ಯಕ್ಕೆ ಎಲ್ಲವೂ ನಾರ್ಮಲ್‌ ಇದೆʼ ಅಂತೇಳಿದೆ.

masthmagaa.com

Contact Us for Advertisement

Leave a Reply