ಚುನಾವಣೆ ಬೆನ್ನಲ್ಲೇ 4,650 ಕೋಟಿ ರೂ. ಮೌಲ್ಯದ ಅಕ್ರಮ ವಸ್ತುಗಳು ವಶ!

masthmagaa.com:

ಲೋಕಸಭಾ ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗಿದ್ದು ಈ ಹೊತ್ತಲ್ಲೇ ಚುನಾವಣಾ ಆಯೋಗ ಭಾರೀ ಬೇಟೆಯಾಡಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 4,650 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಹಣ ಮತ್ತು ಇತರೆ ವಸ್ತುಗಳನ್ನ ಚುನಾವಣಾ ಆಯೋಗ ವಶಪಡಿಸಿಕೊಂಡಿದೆ. ಮಾರ್ಚ್‌ 1ರಿಂದ ಇಲ್ಲಿ ತನಕ ಪ್ರತೀದಿನ 100 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನ ಚುನಾವಣೆ ಆಯೋಗದ ಅಧಿಕಾರಿಗಳು ಸೀಜ್‌ ಮಾಡಿದ್ರು ಅಂತ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ವಶಪಡಿಸಿಕೊಂಡ ಅಕ್ರಮ ಹಣದಲ್ಲಿ ಕ್ಯಾಶ್‌ ಜೊತೆ ಮದ್ಯ, ಫ್ರೀಬೀಸ್‌ ಅಂದ್ರೆ ಸೀರೆ, ಅಂಡೆ ಕುಕ್ಕರ್‌ ಜೊತೆಗೆ ʻಮಾದಕʼ ವಸ್ತುಗಳು ಸೇರಿವೆ. ನೋಡಿ ಇವರು ನಮ್ಮನ್ನ ಆಳೋರು.. ಇದು 2019ರ ಚುನಾವಣೆಯಲ್ಲಿ ಇದೇ ರೀತಿ ವಶಪಡಿಸಿಕೊಂಡ ಅಕ್ರಮ ಕ್ಯಾಶ್‌ ಮತ್ತು ವಸ್ತುಗಳಿಗಿಂತ ಹೆಚ್ಚಿದೆ. 2019ರಲ್ಲಿ ಒಟ್ಟು 3,475 ಕೋಟಿ ರೂಪಾಯಿ ಸೀಜ್‌ ಮಾಡಲಾಗಿತ್ತು ಅಷ್ಟೇ. ಆದ್ರೆ ಈಗ ನೀತಿಸಂಹಿತೆ ಮುಗಿಯೋಕೂ ಮುಂಚೆನೇ ಅದನ್ನೂ ಮೀರಿದ ಅಕ್ರಮ ಹಣ ಪತ್ತೆಯಾಗಿದೆ. ಇನ್ನು ರಾಜ್ಯದಲ್ಲೂ ಕೂಡ ಅಕ್ರಮಗಳ ಆರ್ಭಟ ಜೋರಾಗಿದೆ. ಕರ್ನಾಟಕದಲ್ಲಿ ಸುಮಾರು 45.59 ಕೋಟಿ ರೂಪಾಯಿ ಅಕ್ರಮ ಹಣವನ್ನ ಚುನಾವಣಾ ಆಯೋಗ ವಶಪಡಿಸಿಕೊಂಡಿದೆ. ಜೊತೆಗೆ 151 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮದ್ಯ, 9.93 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳು, 56.86 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು 7.73 ಕೋಟಿ ರೂಪಾಯಿ ಮೌಲ್ಯದ ಫ್ರೀಬೀಸ್‌ ವಶಪಡಿಸಿಕೊಳ್ಳಲಾಗಿದೆ. ಒಟ್ಟು 1,650 FIR ಗಳು ಕೇವಲ ಕರ್ನಾಟಕದಲ್ಲೇ ದಾಖಲಾಗಿದೆ. ಅಂದ್ಹಾಗೆ ಈ ಹಣ ಮತ್ತು ವಸ್ತುಗಳನ್ನ ಮಾರ್ಚ್‌ 16 ನಂತ್ರ ನಡೆಸಿದ ದಾಳಿಯಲ್ಲಿ ಸೀಜ್‌ ಮಾಡಲಾಗಿದೆ. ಅಂದ್ರೆ ಒಂದೇ ತಿಂಗಳಲ್ಲಿ ಇಷ್ಟು ಅಕ್ರಮ ಸಿಕ್ಕಿದೆ. ಹೀಗಂತ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ಧಾರೆ.

-masthmagaa.com

Contact Us for Advertisement

Leave a Reply