8 ಜನ ಉಗ್ರರನ್ನ ಹೊಡೆದುರುಳಿಸಿದ ಪಾಕ್‌ ಸೇನೆ!

masthmagaa.com:

ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ ವೇಳೆ ಪಾಕ್‌ ಸೇನೆ ಹಾಗೂ ಉಗ್ರರ ನಡುವೆ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ 8 ಜನ ಉಗ್ರರನ್ನ ಹೊಡೆದು ಹಾಕಲಾಗಿದೆ ಅಂತ ಪಾಕಿಸ್ತಾನ ಹೇಳಿದೆ. ಖಚಿತ ಗುಪ್ತಚರ ಮಾಹಿತಿ ಆಧಾರದ ಮೇಲೆ ವಜಿರಿಸ್ತಾನ್‌ ಜಿಲ್ಲೆಯ ಏರಿಯಾವೊಂದ್ರಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಭದ್ರತಾ ಪಡೆಗಳು ಮತ್ತು ಉಗ್ರವಾದಿಗಳ ನಡುವೆ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ 8 ಉಗ್ರವಾದಿಗಳು ಸಾವನ್ನಪ್ಪಿದ್ದಾರೆ. ಉಗ್ರರಿಂದ ಶಸ್ತ್ರಾಸ್ತ್ರ, ಸ್ಫೋಟಕ ಮತ್ತು ಮದ್ದುಗುಂಡುಗಳನ್ನ ವಶಪಡಿಸಿಕೊಳ್ಳಲಾಯ್ತು ಅಂತ ಪಾಕ್‌ನ Inter-Services Public Relations (ISPR) ತಿಳಿಸಿದೆ.

-masthmagaa.com

Contact Us for Advertisement

Leave a Reply