ಯುರೋಪ್‌ನಲ್ಲಿ ರೈತರ ಭಾರಿ ಪ್ರತಿಭಟನೆ‌: ಪೊಲೀಸರಿಗೆ ಗಾಯ!

masthmagaa.com:

ಯುರೋಪ್‌ ರೈತರ ಪ್ರತಿಭಟನೆ ಬೆಲ್ಜಿಯಂನ ಬ್ರುಸೆಲ್ಸ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದೆ. ಇತ್ತೀಚೆಗೆ ಯುರೋಪಿಯನ್‌ ಒಕ್ಕೂಟದ ಕೃಷಿ ಸಚಿವರೆಲ್ಲಾ ಮೀಟಿಂಗ್‌ ನಡೆಸಿ ಈ ಬಗ್ಗೆ ಮಾತನಾಡಿದ್ರು. ಇದರ ಬೆನ್ನಲ್ಲೇ ಪ್ರತಿಭಟನೆಕಾರರು EU ಕೇಂದ್ರ ಕಚೇರಿ ಬಳಿ ವೈಲೆಂಟ್‌ ಆಗಿದ್ದಾರೆ. ಅಲ್ಲಿನ ರಕ್ಷಣಾ ಸಿಬ್ಬಂಧಿ ಮೇಲೆ ಬೆಂಕಿ ಹಚ್ಚಿರೋ ಮದ್ಯದ ಬಾಟಲಿಗಳನ್ನ ಎಸೆದಿದ್ದಾರೆ. ಪೊಲೀಸರ ಮೇಲೆ ಗೊಬ್ಬರ ಸ್ಪ್ರೇ ಮಾಡಿದ್ದಾರೆ. ಈ ವೇಳೆ ಹಲವರು ಪೊಲೀಸ್‌ ಸಿಬ್ಬಂದಿಗೆ ಗಾಯಗಳಾಗಿವೆ. ಮುಖ್ಯವಾಗಿ ಯುರೋಪ್‌ನ ಪರಿಸರಕ್ಕೆ ಸಂಬಂಧಪಟ್ಟ ಕ್ರಮಗಳ ವಿರುದ್ಧ, ಯುಕ್ರೇನ್‌ನಿಂದ ಆಹಾರ ಪದಾರ್ಥಗಳ ಆಮದಿನ ವಿರುದ್ಧ ಅಲ್ಲಿ ಪ್ರತಿಭಟನೆ ನಡೆಸಲಾಗ್ತಿದೆ.

-masthmagaa.com

Contact Us for Advertisement

Leave a Reply