VVPAT ವರಿಫಿಕೇಶನ್‌ನಲ್ಲಿ ಮನುಷ್ಯರ ಹಸ್ತಕ್ಷೇಪ ಬೇಡ: ಸುಪ್ರಿಂ ಕೋರ್ಟ್

masthmagaa.com:

ಚುನಾವಣೆಗಳಲ್ಲಿ ಮತಯಂತ್ರದ ಜೊತೆಗೆ ಬಳಸೋ VVPATಗಳ ಬಳಕೆಯಲ್ಲಿ ಈಗಿರೋ ವ್ಯವಸ್ಥೆ ಸರಿಯಾಗೆ ಇದೆ ಅಂತ ಸುಪ್ರಿಂ ಕೋರ್ಟ್‌ ಹೇಳಿದೆ. VVPATಗಳಲ್ಲಿ ರೆಕಾರ್ಡ್ ಆಗೋ ಎಲ್ಲಾ ವೋಟ್‌ಗಳನ್ನ ಕ್ರಾಸ್ ವೆರಿಫಿಕೇಶನ್‌ ಮಾಡ್ಬೇಕು.. ಮತದಾರರ ಕೈಗೆ ಆ ವರಿಫಿಕೇಶನ್‌ ಚೀಟಿ ಬಂದು ಕನ್ಫರ್ಮ್‌ ಆಗ್ಬೇಕು. ಇದಕ್ಕೆ ಸಂಬಂಧಪಟ್ಟಂತೆ ಸುಪ್ರಿಂ ಕೋರ್ಟ್‌ ಆದೇಶ ಕೊಡ್ಬೇಕು ಅಂತ ಹಲವು ಅರ್ಜಿಗಳು ಕೋರ್ಟ್‌ಗೆ ಬಂದಿದ್ವು. ಮಂಗಳವಾರ ಈ ಅರ್ಜಿ ವಿಚಾರಣೆ ವೇಳೆ ಸುಪ್ರಿಂ ಕೋರ್ಟ್‌, ʻದೇಶದಲ್ಲಿ 97 ಕೋಟಿ ಮತದಾರರು ರಿಜಿಸ್ಟರ್‌ ಆಗಿದ್ದಾರೆ. ಬ್ಯಾಲೆಟ್‌ ಪೇಪರ್‌ ಸಿಸ್ಟಮ್‌ ಇದ್ದಾಗ ಏನಾಗಿದೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಮನುಷ್ಯರು ಕೈ ಹಾಕಿದ್ರೆ ಇದ್ರಲ್ಲಿ ತೊಂದರೆ ಸೃಷ್ಟಿ ಆಗೇ ಆಗುತ್ತೆ. ಹಾಗಾಗಿ ಇದ್ರಲ್ಲಿ ಮನುಷ್ಯರು ಕೈ ಹಾಕೋದು ಬೇಡ. ಈ ರೀತಿಯ ವ್ಯವಸ್ಥೆಯನ್ನ ಕೆಡವಲು ಪ್ರಯತ್ನ ಪಡ್ಬೇಡಿ ಅಂತೇಳಿದೆ.ʼ ಇನ್ನು ಅಸೋಸಿಯೇಶನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್‌ ಅಥ್ವಾ ADR ಕೂಡ ಈ ಬಗ್ಗೆ ಅರ್ಜಿ ಸಲ್ಲಿಸಿತ್ತು.

-masthmagaa.com

Contact Us for Advertisement

Leave a Reply