BIGGBOSS ಮೇಲೆ FIR! BADBOSS MADNESS! ಚಪ್ಪಲಿ, ಸೋಪಿನ ನೀರು, ಬೆದರಿಕೆ!

masthmagaa.com:

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಬಿಗ್‌ಬಾಸ್‌ ಶೋ ಅತಿರೇಕಕ್ಕೆ ಹೋಗ್ತಿದೆ ಅಂತ ವ್ಯಾಪಕ ಜನಾಕ್ರೋಶ ವ್ಯಕ್ತವಾಗ್ತಿದೆ. ಅಷ್ಟೇ ಅಲ್ಲದೇ ರಿಯಾಲಿಟಿ ಶೋ ವಿರುದ್ಧ ಕ್ರಮಕೈಗೊಳ್ಳಬೇಕು ಅಂತ ಶಿವಮೊಗ್ಗ ಜಿಲ್ಲೆಯ ವಕೀಲರೊಬ್ರು ಪೋಲಿಸ್‌ ಕಂಪ್ಲೇಂಟ್‌ ನೀಡಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಭಾರತೀಯ ಮಾಧ್ಯಮ ನಿಯಂತ್ರಣ ಪ್ರಾಧಿಕಾರಕ್ಕೆ ಕೂಡ ಇಮೇಲ್ ಹಾಗೂ ಅಂಚೆ ಮೂಲಕ ದೂರು ನೀಡಲಾಗಿದೆ. ಈ ಶೋ ತೀರ ನೈತಿಕ ಗುಣಮಟ್ಟ ಕಳೆದುಕೊಂಡಿದೆ, ಅಶ್ಲೀಲ ಪದ ಮತ್ತು ಚಪ್ಪಲಿಯಿಂದ ಹೊಡೆದಾಡುವ ದೃಶ್ಯಗಳು, ಬೆದರಿಕೆ ಹಾಕುತ್ತಿರುವುದು ಸ್ಪರ್ಧಿಗಳ ನಡುವೆ ಸರ್ವೇಸಾಮಾನ್ಯವಾಗಿದೆ. ಇದು ಕೌಟುಂಬಿಕ ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಅಂತ ದೂರಿನಲ್ಲಿ ತಿಳಿಸಲಾಗಿದೆ. ಇನ್ನೊಂದ್ಕಡೆ ಬಿಗ್‌ಬಾಸ್‌ ಸ್ಪರ್ಧಿಗಳ ವರ್ತನೆ ವಿರುದ್ದ ಜನಾಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಹಲವಾರು ಜನ ಟ್ವಿಟರ್‌ ಅಂದ್ರೆ Xನಲ್ಲಿ ಬೆಂಗಳೂರು ಪೋಲಿಸರನ್ನ ಟ್ಯಾಗ್ ಮಾಡ್ತಿದ್ದಾರೆ. ಇತರ ಸ್ವರ್ಧಿಗಳ ಮುಖಕ್ಕೆ ಡಿಟರ್ಜೆಂಟ್‌ ಮಿಶ್ರಿತ ನೀರು ಹಾಕಲಾಗಿದೆ. ಸ್ಪರ್ಧಿಗಳ ವ್ಯಕ್ತಿತ್ವ ಸಂರಕ್ಷಣೆ ಆಗಲಿ. ಎಲ್ಲೆ ಮೀರಿದ ವರ್ತನೆಯಿಂದ ಬಿಗ್ ಬಾಸ್ ಮುಂದುವರೆಯುತ್ತಿದೆ. ಜೀವ ಬೆದರಿಕೆ ದಮ್ಕಿ ಸೇರಿ ವಿವಿಧ ರೀತಿ ಹಲ್ಲೆ ನಡೆಯುವ ಯತ್ನ ಆಗ್ತಿದೆ. ದಯವಿಟ್ಟು ಕಣ್ಣಿಡಿ ಅಂತ ಪೊಲೀಸರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಲಾಗುತ್ತಿದೆ. ಟಾಸ್ಕ್ ವೇಳೆ ಪ್ರತಾಪ್ ಹಾಗೂ ಸಂಗೀತಾ ಕಣ್ಣಿಗೆ ಹಾನಿಯಾಗಿದೆ. ಈ ವರ್ತನೆ ವಿರುದ್ಧ ಕ್ರಮ ಕೈಗೊಳ್ಳಿ ಅಂತ ಜನ ಆಗ್ರಹಿಸಿದ್ದಾರೆ. ಇದರ ಜೊತೆಗೆ ಬಿಗ್ ಬಾಸ್ ಸ್ವರ್ಧಿ ವಿನಯ್ ಗೌಡ ಇತರೆ ಸ್ವರ್ಧಿಗಳಿಗೆ ನೇರವಾಗಿ ಬೆದರಿಕೆ ಹಾಕ್ತಿದ್ದಾರೆ. ಸೆಕ್ಷನ್ 506 ಪ್ರಕಾರ ಸುಮೋಟೊ ಕೇಸ್ ಹಾಕುವಂತೆ ಟ್ವಿಟ್ ಮೂಲಕ‌ ಮನವಿ ಮಾಡಲಾಗುತ್ತಿದೆ. ಇನ್ನೂ ಕೆಲವು ಸ್ಪರ್ಧಿಗಳಿಂದ ವೈಲೆನ್ಸ್ ಆಗ್ತಿದೆ ಅಂತಲೂ ಕಿಡಿಕಾರಲಾಗಿದೆ. ಇನ್ನು ಅತ್ತ ಇದೇ ವೇಳೆ ಸುದೀಪ್‌ ಅಭಿಮಾನಿಗಳು ಈ ಕೆಟ್ಟ ಶೋ ನಿಂದ ಸುದೀಪ್ ಸರ್ ಹೊರ ಬನ್ನಿ. ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ಇಂತಹ ಶೋ ನಡೆಸಿಕೊಡಬೇಡಿ ಅಂತ ಕಿಚ್ಚನಿಗೆ ಮನವಿ ಮಾಡ್ತಿದ್ದಾರೆ.

-masthmagaa.com

Contact Us for Advertisement

Leave a Reply