ನಟ ಸಲ್ಮಾನ್‌ ಖಾನ್‌ ಮನೆ ಮುಂದೆ ಗುಂಡು ಹಾರಿಸಿದ್ದು ಗ್ಯಾಂಗ್‌ಸ್ಟರ್‌!

masthmagaa.com:

ನೆನ್ನೆ ಬೆಳಗಿನ ಜಾವ ಮುಂಬೈನ ಬಾಂದ್ರಾದಲ್ಲಿರೋ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮನೆ ಹೊರಗೆ ದುಷ್ಕರ್ಮಿಗಳು ಗುಂಡು ಹಾರಿಸಿ ಹೋಗಿದ್ರು. ಈ ಸಂಬಂಧ ಇದೀಗ ಪುನಃ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಹೆಸ್ರು ಕೇಳಿ ಬರ್ತಿದೆ. ಸಲ್ಮಾನ್‌ ಖಾನ್‌ರ ಮನೆ ಹೊರಗೆ ಗುಂಡು ಹಾರಿಸಿದ ವ್ಯಕ್ತಿಯನ್ನ ಹರಿಯಾಣದ ಗುರಗಾಂವ್‌ ಮೂಲದ ವಿಶಾಲ್‌ ರಾಹುಲ್‌ ಅನ್ನೋ ಗ್ಯಾಂಗ್‌ಸ್ಟರ್‌ ಅಂತ ಗುರುತಿಸಲಾಗಿದೆ. ಸಿಸಿಟಿವಿಯಲ್ಲಿ ಈತನ ಮುಖ ಕ್ಲಿಯರ್ರಾಗಿ ಕಾಣಿಸಿದೆ. ಈತ ಹಾಗೂ ಇನ್ನೊಬ್ಬ ಬೈಕ್‌ ಮೇಲೆ ಬಂದು, ಗಾಡಿಯನ್ನ ನಿಲ್ಲಿಸದೇ ಸಲ್ಮಾನ್‌ ಖಾನ್‌ ಮನೆ ಕಡೆ ಗುಂಡು ಹಾರಿಸಿ ಹೋಗಿದ್ದಾರೆ. ಇನ್ನು ಈ ಘಟನೆಯಾದ ಕೆಲವೇ ಗಂಟೆಗಳಲ್ಲಿ ಬಂಧಿತ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌, ಸಹೋದರ ಅನ್ಮೋಲ್‌ ಬಿಷ್ಣೋಯ್‌ ಇದರ ಹೊಣೆ ಹೊತ್ಕೊಂಡಿದ್ದಾನೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ಇದು ಕೇವಲ ಟ್ರೇಲರ್‌ ಅಷ್ಟೇ ಅಂದಿದ್ದಾನೆ. ಇನ್ನು ಸಲ್ಮಾನ್‌ ಖಾನ್‌ ಮನೆ ಮೇಲೆ ಗುಂಡು ಹಾರಿಸಿದ ಗ್ಯಾಂಗ್‌ಸ್ಟರ್‌ ವಿಶಾಲ್‌ ರಾಹುಲ್‌ ಈ ಹಿಂದೆ ಹರಿಯಾಣದಲ್ಲಿ ಸಾಕಷ್ಟು ಹತ್ಯೆ ಮತ್ತು ದರೋಡೆಗಳಲ್ಲಿ ಇನ್ವಾಲ್ವ್‌ ಆಗಿದ್ದ. ಈತನ ವಿರುದ್ಧ 5ಕ್ಕೂ ಹೆಚ್ಚು ಕ್ರಿಮಿನಲ್‌ ಕೇಸ್‌ಗಳು ದಾಖಲಾಗಿವೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply