ನಾಜಿ ಆಡಳಿತದ ಹೋಲಿಕೆ: ಜರ್ಸಿ ನಂ. 44ರ ಮಾರಾಟಕ್ಕೆ ಬ್ರೇಕ್‌!

masthmagaa.com:

ಜರ್ಮನ್‌ ಪುಟ್ಬಾಲ್‌ ಅಸೋಸಿಯೇಶನ್‌ ಮತ್ತು ಅಡಿಡಾಸ್‌ ಕಂಪನಿ 44 ಸಂಖ್ಯೆ ಹೊಂದಿರೊ ಜರ್ಸಿಗಳ ಮಾರಾಟವನ್ನ ನಿಲ್ಲಿಸಿವೆ. 44 ಅಂಕಿಯ ಜೆರ್ಸಿಗಳನ್ನ ಮಾರಾಟ ಮಾಡೊಕೊ ಮುಂದಾದಾಗ ʻ44ʼ ಇದು ನಾಜಿಗಳ ‘SS’ ಸಂಕೇತದ ತರ ಕಾಣಿಸುತ್ತೆ. ಇದು ಹಿಟ್ಲರ್‌ನ ಆಡಳಿತದಲ್ಲಿನ ಅರೆ ಸೈನಿಕರ ಪಡೆಯನ್ನ ಹೋಲುತ್ತೆ ಅಂತೇಳಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ಕೇಳಿ ಬಂದಿತ್ತು. ಇದ್ರ ಬೆನ್ನಲ್ಲೆ ಜರ್ಮನ್‌ ಪುಟ್ಬಾಲ್‌ ಅಸೋಸಿಯೇಶನ್‌ ಮತ್ತು ಅಡಿಡಾಸ್‌ ಕಂಪನಿ ಈ ಮಾರಾಟ ಕ್ರಮದಿಂದ ಹಿಂದೆ ಸರಿದಿವೆ.

-masthmagaa.com

Contact Us for Advertisement

Leave a Reply