ದಹಲಿ ರೈತರ ಪ್ರತಿಭಟನೆ ಸ್ಥಗಿತ! ಕೇಂದ್ರದಿಂದ ಹೊಸ ಪ್ರಸ್ತಾವನೆ!

masthmagaa.com:

ದೆಹಲಿಯ ರೈತರ ಪ್ರತಿಭಟನೆಯ ಭಾಗವಾಗಿ ಫೆಬ್ರುವರಿ 18ರಂದು ರೈತ ಮುಖಂಡರು ಮತ್ತು ಕೇಂದ್ರ ಸಚಿವರ ನಡುವೆ 4ನೇ ಹಂತದ ಮಾತುಕತೆ ನಡೆದಿದೆ. ಈ ವೇಳೆ ರೈತರ ಡಿಮಾಂಡ್‌ಗೆ ಸರ್ಕಾರ ಪಾಸಿಟಿವ್‌ ಆಗಿ ರಿಯಾಕ್ಟ್‌ ಮಾಡಿದೆ. ರೈತರಿಗೆ 5 ಇಯರ್‌ ಪ್ಲಾನ್‌ ಅಥ್ವಾ 5 ವರ್ಷಗಳ ಯೋಜನೆಯ ಪ್ರಸ್ತಾವನೆ ಮುಂದಿಟ್ಟಿದೆ. ಈ ಪ್ರಕಾರ, ಮುಂದಿನ 5 ವರ್ಷಗಳವರೆಗೆ ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನ ಕನಿಷ್ಠ ಬೆಂಬಲ ಬೆಲೆಯಲ್ಲಿ (MSP) ಖರೀದಿಸೋಕೆ ನೋಡ್ತಿದೆ. ಸೋ ಸರ್ಕಾರ ನೀಡಿದ ಈ ಪ್ರಸ್ತಾವನೆ ಕುರಿತು ಚರ್ಚೆ ನಡೆಸಿ ಒಂದು ನಿರ್ಧಾರಕ್ಕೆ ಬರೋಕೆ ರೈತರು 2 ದಿನಗಳ ಕಾಲಾವಕಾಶ ಕೇಳಿದ್ದಾರೆ. ಆದ್ರಿಂದ ರೈತರ ಪ್ರತಿಭಟನೆಗೆ ಸದ್ಯ ಬ್ರೇಕ್‌ ಬಿದ್ದಿದೆ. ಈ ಮೂಲಕ ಸದ್ಯ ರೈತರ ಒಂದು ಪ್ರಮುಖ ಬೇಡಿಕೆಗೆ ಸರ್ಕಾರ ಸೊಲ್ಯೂಷನ್‌ ನೀಡಿದೆ. ಇನ್ನು ಪ್ರಸ್ತಾವನೆ ಬಗ್ಗೆ ರಿಯಾಕ್ಟ್‌ ಮಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯುಷ್‌ ಗೋಯಲ್‌, ʻಸರ್ಕಾರಿ ಸಂಸ್ಥೆಗಳು ರೈತರೊಂದಿಗೆ ಈ ಒಪ್ಪಂದಕ್ಕೆ ಸೈನ್‌ ಹಾಕಲಿವೆ. ಮುಂದಿನ ಐದು ವರ್ಷಗಳವರೆಗೆ ರೈತರ ಉತ್ಪನ್ನಗಳ ಖರೀದಿಗೆ ಯಾವ್ದೇ ರೀತಿಯ ಲಿಮಿಟ್‌ ಇರಲ್ಲʼ ಅಂದಿದ್ದಾರೆ. ಅಂದ್ಹಾಗೆ 4ನೇ ಹಂತದ ಈ ಮೀಟಿಂಗ್‌ನಲ್ಲಿ ಪಿಯೂಷ್‌ ಗೋಯಲ್‌ರೊಂದಿಗೆ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್‌ ಮುಂಡಾ, ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಭಾಗಿಯಾಗಿದ್ರು. ಅಷ್ಟೇ ಅಲ್ದೇ ಪಂಜಾಬ್‌ ಸಿಎಂ ಭಗವಂತ್‌ ಮನ್‌ ಕೂಡ ಈ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ರು.

-masthmagaa.com

Contact Us for Advertisement

Leave a Reply