ಸಲ್ಮಾನ್‌ ಖಾನ್‌ ಮನೆ ಮುಂದೆ ದಾಳಿ ಮಾಡಿದ ಆರೋಪಿಗಳ ಬಂಧನ!

masthmagaa.com:

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮನೆ ಮುಂದೆ ಗುಂಡಿನ ದಾಳಿ ನಡೆದಿರೋ ವಿಚಾರವಾಗಿ ಮುಂಬೈನ ಕ್ರೈಮ್‌ ಬ್ರಾಂಚ್‌ ಇದೀಗ ಇಬ್ಬರು ಆರೋಪಿಗಳನ್ನ ಅರೆಸ್ಟ್‌ ಮಾಡಿದೆ. ಬಂಧಿತ ಆರೋಪಿಗಳನ್ನ ಬಿಹಾರ್‌ ಮೂಲದ 24 ವರ್ಷದ ಸಾಹಬ್‌ ಗುಪ್ತಾ ಮತ್ತು 21 ವರ್ಷದ ಸಾಗರ್‌ ಶ್ರೀಜೋಗೇಂದ್ರ ಪಾಲ್‌ ಅಂತ ಗುರುತಿಸಲಾಗಿದೆ. ಅಂದ್ಹಾಗೆ ಇವ್ರಿಬ್ರಿಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಸಹೋದರ ಅನ್ಮೋಲ್‌ ಬಿಷ್ಣೋಯ್‌ನ ಗ್ಯಾಂಗ್‌ ಸುಪಾರಿ ನೀಡಿದೆ ಅಂತ ಮುಂಬೈ ಪೊಲೀಸ್‌ ಮೂಲಗಳು ತಿಳಿಸಿವೆ. ಇನ್ನು ಈ ಬೆನ್ನಲ್ಲೇ ಸಲ್ಮಾನ್‌ ಖಾನ್‌ರ ನಿವಾಸಕ್ಕೆ ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಶಿಂಧೆಯವ್ರು, ʻಮಹಾರಾಷ್ಟ್ರ ಸರ್ಕಾರ ನಿಮ್ಮೊಂದಿಗಿದೆ. ಈ ರೀತಿ ಮತ್ತೊಮೆ ಆಗೋಕೆ ಬಿಡಲ್ಲ. ನಾವು ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ನ್ನ ಮುಗಿಸಿ ಬಿಡ್ತೀವಿʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply