ತಮ್ಮೆಲ್ಲಾ ಆಸ್ತಿ ದಾನ ಮಾಡಿ ಮೋಕ್ಷ ಹುಡುಕಲಿದ್ದಾರೆ ಗುಜರಾತ್‌ನ ದಂಪತಿ!

masthmagaa.com:

ಗುಜರಾತ್‌ನಲ್ಲಿ ಜೈನ ಸಮುದಾಯಕ್ಕೆ ಸೇರಿದ ದಂಪತಿ ತಮಗೆ ಸೇರಿದ ಸುಮಾರು 200 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ದಾನ ಮಾಡಿ ಮೋಕ್ಷ ಹುಡುಕ್ತಾ ಹೋಗೋಕೆ ರೆಡಿಯಾಗಿದ್ದಾರೆ. ಬಿಸ್‌ನೆಸ್‌ಮ್ಯಾನ್‌ ಭಾವೇಶ್‌ ಭಂಡಾರಿ ಮತ್ತವ್ರ ಪತ್ನಿ ಕಳೆದ ಫೆಬ್ರುವರಿ ತಿಂಗಳಲ್ಲಿ ಇದಕ್ಕೆ ಸಮಾರಂಭವನ್ನ‌ ನಡೆಸಿ ತಮ್ಮೆಲ್ಲಾ ಆಸ್ತಿಯನ್ನ ದಾನ ಮಾಡಿದ್ದಾರೆ. ಇವ್ರ 19 ವರ್ಷದ ಮಗಳು ಮತ್ತು 16 ವರ್ಷದ ಮಗ 2022ರಲ್ಲಿ ಸನ್ಯಾಸತ್ವ ಪಡೆದಿದ್ರು. ಸೋ ತಮ್ಮ ಮಕ್ಕಳಿಂದ ಈ ದಂಪತಿ ಸ್ಪೂರ್ತಿ ಪಡೆದು…ಈ ರೀತಿ ಮಾಡೋಕೆ ಮುಂದಾಗಿದ್ದಾರೆ ಅಂತೇಳಲಾಗ್ತಿದೆ. ಈಗಾಗಲೇ ದಾನ ಮಾಡಿದ್ದಾರೆ. ಈಗ ಮೋಕ್ಷ ಹುಡುಕೋಕೆ ಹೋಗ್ತಿದ್ದರಂತೆ.. ಬರೋ ಏಪ್ರಿಲ್‌ 22ರಂದು ಇವ್ರು ಸನ್ಯಾಸತ್ವ ಸ್ವೀಕಾರ ಮಾಡಲಿದ್ದಾರೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply