4.3 ಕೋಟಿ ವಂಚನೆ ಕೇಸ್:‌ ಕಜೀನ್‌ ವಿರುದ್ದವೇ ಹಾರ್ದಿಕ್ ಪಾಂಡ್ಯ ದೂರು!

masthmagaa.com:

ಟೀಮ್‌ ಇಂಡಿಯಾ ಸ್ಟಾರ್‌ ಆಟಗಾರ ಹಾರ್ದಿಕ ಪಾಂಡ್ಯ 4.3ಕೋಟಿ ವಂಚನೆ ವಿಚಾರವಾಗಿ ತಮ್ಮ ಕಜೀನ್‌ ವೈಭವ ಪಾಂಡ್ಯ ವಿರುದ್ದ ಪೋಲಿಸರಿಗೆ ದೂರು ನೀಡಿದ್ದಾರೆ. ಹಾರ್ದಿಕ್‌ ದೂರಿನ ಮೇರೆಗೆ ಮುಂಬೈ ಪೋಲಿಸರು ವೈಭವ್‌ರನ್ನ ಬಂಧಿಸಿದ್ದಾರೆ. ಈ ಹಿಂದೆ 2021ರಲ್ಲಿ ಹಾರ್ದಿಕ್‌, ಅವ್ರ ಸಹೋದರ ಕೃನಾಲ್‌ ಹಾಗೂ ಕಜೀನ್‌ ವೈಭವ್‌ ಪಾಂಡ್ಯ ಮೂವರು ಪ್ಯಾಂಡ್ಯ ಬ್ರದರ್ಸ್ ಸೇರಿ ಪಾಲುದಾರಿಕೆ ಸಂಸ್ಥೆಯೊಂದನ್ನ ಸ್ಥಾಪಿಸಿದ್ರು. ಅದ್ರ ಬಂದ ಲಾಭದಿಂದ ಹಾರ್ದಿಕ್‌ ಮತ್ತು ಕೃನಾಲ್‌ ಗೆ 40 % ಹಾಗೂ ವೈಭವ್‌ಗೆ 20 % ಲಾಭ ಸಿಗಬೇಕಿತ್ತು. ಆದ್ರೆ ವೈಭವ್‌ ಮಾತ್ರ ತಾವು ಸ್ಥಾಪಿಸಿರೊ ಮತ್ತೊಂದು ಪ್ರತ್ಯೇಕ ಕಂಪನಿಗೆ ಈ ಪಾಲುದಾರಿಕಾ ಸಂಸ್ಥೆಯ ಹಣ ಬಳಸಿಕೊಂಡಿದ್ದಾರೆ ಅಂತ ಹಾರ್ದಿಕ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

-masthmagaa.com

Contact Us for Advertisement

Leave a Reply