ಇತಿಹಾಸವನ್ನ ಚೇಂಜ್‌ ಮಾಡೋಕಾಗುತ್ತಾ..ಹೇಗೆ? ಅಮಿತ್‌ ಶಾ ಮಾತಿಗೆ ನಿತೀಶ್‌ ಟಾಂಗ್‌

masthmagaa.com:

ಇತ್ತೀಚೆಗೆ ದೇಶದಲ್ಲಿ ಪಠ್ಯ ಪುಸ್ತಕ , ಇತಿಹಾಸ ಅಂತ ಭಾರಿ ಚರ್ಚೆ ನಡೀತಿದೆ. ಈಗ ಆ ಚರ್ಚೆಗೆ ಬಿಹಾರ್‌ ಸಿಎಂ ನಿತೀಶ್‌ ಕುಮಾರ್‌ ಎಂಟ್ರಿಯಾಗಿದ್ದು ತಮ್ಮ ದೋಸ್ತಿ ಬಿಜೆಪಿಗೆ ಟಾಂಗ್‌ ಕೊಟ್ಟಿದ್ದಾರೆ. ಕಳೆದ ವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ʻನಮ್ಮ ಇತಿಹಾಸದಲ್ಲಿ, ಪಠ್ಯಪುಸ್ತಕಗಳಲ್ಲಿ ಬರೀ ಮೊಘಲರ ಬಗ್ಗೆ ಮಾತ್ರ ಕೊಡಲಾಗಿದೆ. ಆದ್ರೆ ಈಗ ಅದನ್ನ ಚೇಂಜ್‌ ಮಾಡೋ ಸಮಯ ಬಂದಿದೆ. ನಮ್ಮ ಇತಿಹಾಸ ಬರೆಯೋ ಸಮಯ ಬಂದಿದೆ ಅಂತ ಹೇಳಿದ್ರು. ಅದಕ್ಕೆ ಈಗ ನಿತೀಶ್‌ ಪ್ರತಿಕ್ರಿಯಿಸಿದ್ದು ಇತಿಹಾಸವನ್ನ ಬದಲಾಯಿಸೋಕೆ ಆಗುತ್ತಾ? ನನಗಂತೂ ಅದನ್ನ ಹೇಗ್‌ ಚೇಂಜ್‌ ಮಾಡ್ತಾರೆ ಅಂತ ಗೊತ್ತಿಲ್ಲ. ಇತಿಹಾಸ ಇತಿಹಾಸನೇ ಅಂತ ಹೇಳಿದ್ದಾರೆ. ಅಂದ್ಹಾಗೆ ಬಿಜೆಪಿ ಬೆಂಬಲ ಪಡೆದು ಈಗ ನಿತೀಶ್‌ ಬಿಹಾರದಲ್ಲಿ ಸಿಎಂ ಆಗಿರಬೋದು. ಆದ್ರೆ ಇಬ್ಬರಿಗೂ ಕೂಡ ಸೈದ್ದಾಂತಿಕ ವಿಚಾರದಲ್ಲಿ ಪರಸ್ಪರ ವಿರೋಧ ಇದೆ. ಈ ಹಿಂದೆ ಕೂಡ ಅಯೋಧ್ಯ, 370 ರದ್ದತಿ, ತ್ರಿಬಲ್‌ ತಲಾಕ್‌, CAA NRC ಹೀಗೆ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳಲ್ಲಿಇಬ್ಬರಿಗೂ ಹೊಂದಾಣಿಕೆ ಇರ್ಲಿಲ್ಲ. ಆದ್ರೆ ಅಧಿಕಾರದ ಆಸೆ ರಾಜಕಾರಣದಲ್ಲಿ ಏನು ಬೇಕಾದ್ರೂ ಬದಲಾಯಿಸುತ್ತೆ, ಯಾರನ್ನ ಬೇಕಾದ್ರೂ ಒಂದು ಮಾಡುತ್ತೆ ಅನ್ನೋ ರಾಜಕೀಯದ ನೂರಾರು ಉದಾಹರಣೆಗಳಲ್ಲಿ ಇವರಿಬ್ಬರದೂ ಕೂಡ ಒಂದು.

-masthmagaa.com

Contact Us for Advertisement

Leave a Reply