ಇಮ್ರಾನ್‌ ಖಾನ್‌ ಹಳೇ ಹೆಂಡ್ತಿ ಮೇಲೆ ಅಟ್ಯಾಕ್

masthmagaa.com:

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪತ್ನಿ ರೇಹಮ್ ಖಾನ್ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಕಾರಿನಲ್ಲಿ ಹೋಗ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ. ಜಸ್ಟ್ ಮಿಸ್ ಆಗಿ ಉಳ್ಕೊಂಡೆ ಅಂತ ಖುದ್ದು ಅವರೇ ಟ್ವೀಟ್ ಮಾಡಿದ್ದಾರೆ. ಜೊತೆಗೆ ಇದೇನಾ ಇಮ್ರಾನ್ ಖಾನ್​​​ರ ಹೊಸ ಪಾಕಿಸ್ತಾನ? ಮೋಸಗಾರರು, ಲೂಟಿಕೋರರು ಮತ್ತು ಅಸೂಯೆ ಹೊಂದಿರೋರ ದೇಶಕ್ಕೆ ಸ್ವಾಗತ ಅಂತ ತಮ್ಮ ಮಾಜಿ ಪತಿರಾಯರ ಸರ್ಕಾರವನ್ನ ಟೀಕಿಸಿದ್ದಾರೆ. ಜೊತೆಗೆ ನಾನು ಸಾಮಾನ್ಯ ಪಾಕಿಸ್ತಾನಿ ಪ್ರಜೆಯಂತೆ ಬದುಕಿ, ಸಾಯೋಕೆ ಇಷ್ಟಪಡ್ತೀನಿ. ನಡುರಸ್ತೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಗಾಳಿಗೆ ತೂರಲಿ.. ಕುತಂತ್ರಿಗಳ ರೀತಿ ನನ್ನ ಮೇಲೆ ದಾಳಿ ಮಾಡಲಿ.. ಇವೆಲ್ಲದ್ರ ಜವಾಬ್ದಾರಿಯನ್ನು ಸರ್ಕಾರವೇ ಹೊತ್ತುಕೊಳ್ಳಬೇಕು. ನಂದೇನು ತೊಂದ್ರೆ ಇಲ್ಲ.. ನಾನು ದೇಶಕ್ಕೆ ಜೀವ ಕೊಡೋಕೆ ರೆಡಿ ಇದ್ದೀನಿ ಅಂತ ಹೇಳಿದ್ದಾರೆ. ರೇಹಂ ಖಾನ್ ಇಮ್ರಾನ್ ಖಾನ್ ವಿರದ್ಧ ಕಿಡಿಕಾರೋದು ಇದೇ ಮೊದಲೇನಲ್ಲ.. ಆಗಾಗ ಇಮ್ರಾನ್ ಖಾನ್ ವಿರುದ್ಧ ಮಾತಾಡ್ತಾನೇ ಇರ್ತಾರೆ. ಅಂದಹಾಗೆ ಬ್ರಿಟಿಷ್-ಪಾಕಿಸ್ತಾನಿ ಪತ್ರಕರ್ತೆಯಾಗಿದ್ದ ರೇಹಂ ಖಾನ್, ಆ್ಯಂಕರ್ ಆಗಿ ಕೆಲಸ ಮಾಡ್ತಿದ್ರು. ನಂತರ 2015ರ ಜನವರಿಯಲ್ಲಿ ಇಮ್ರಾನ್ ಖಾನ್​ರನ್ನು ಮದ್ವೆಯಾಗಿದ್ರು. ಇಸ್ಲಾಮಾಬಾದ್​​ನ ಇಮ್ರಾನ್ ಖಾನ್ ಮನೆಯಲ್ಲಿ ಸಣ್ಣ ಮಟ್ಟದಲ್ಲಿ ಈ ಮದ್ವೆ ನಡೆದಿತ್ತು. ಆದ್ರೆ 10 ತಿಂಗಳಲ್ಲೇ ಇವರ ಮದುವೆ ಮುರಿದುಬಿದ್ದಿತ್ತು. ಇಬ್ಬರು ಡಿವೋರ್ಸ್​​ಗೆ ಅರ್ಜಿ ಸಲ್ಲಿಸಿದ್ರು.

-masthmagaa.com

Contact Us for Advertisement

Leave a Reply