4ನೇ ಟೆಸ್ಟ್‌ನಲ್ಲಿ ಜೋ ರೂಟ್‌ ಶತಕ! ಚುನಾವಣಾ ಐಕಾನ್ ಆದ ಗಿಲ್!

masthmagaa.com:

ರಾಂಚಿಯಲ್ಲಿ ನಡೆತಿರೋ ಭಾರತ-ಇಂಗ್ಲೆಂಡ್‌ ನಡುವಿನ 4ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಜೋ ರೂಟ್‌ರ 122 ರನ್‌ಗಳ ಉತ್ತಮ ಪ್ರದರ್ಶನದಿಂದ, ಇಂಗ್ಲೆಂಡ್ 353 ರನ್‌ ಕಲೆಹಾಕಿದೆ. ನಂತರ ಮೊದಲ ಇನ್ನಿಂಗ್ಸ್‌ ಶರು ಮಾಡಿರೋ ಟೀಮ್‌ ಇಂಡಿಯಾದ ಬ್ಯಾಟರ್‌ಗಳು ನೀರಸ ಪ್ರದರ್ಶನ ತೋರಿದ್ದಾರೆ. ಆದ್ರೆ ಅತ್ಯದ್ಬುತ ಲಯದಲ್ಲಿರೊ ಯಶಸ್ವಿ ಜೈಸ್ವಾಲ್‌ರ 73 ರನ್‌ಗಳ ನೆರವಿನಿಂದ, ಭಾರತ 2ನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ ನಷ್ಟಕ್ಕೆ 219 ರನ್‌ ಗಳಿಸಿದೆ. 30 ರನ್‌ ಗಳಿಸಿರೋ ಯುವ ಆಟಗಾರ ‌ಧ್ರುವ್ ಜುರೇಲ್ ಜೊತೆ ಕುಲ್ದೀಪ್‌ ಯಾದವ್‌ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮತ್ತೊಂದೆಡೆ ಪಂಜಾಬ್‌ ರಾಜ್ಯ ಚುನಾವಣಾ ಆಯೋಗ ಯುವ ಕ್ರಿಕೆಟಿಗ ಶುಭಮನ್‌ ಗಿಲ್‌ ಅವ್ರನ್ನ ಪಂಜಾಬ್ ಚುನಾವಣಾ‌ ಐಕಾನ್‌ ಆಗಿ ಆಯ್ಕೆ ಮಾಡಿದೆ. ಈ ಮೂಲಕ ಲೋಕಸಭೆ ಚುನಾವಣೆ ವೇಳೆ ಪಂಜಾಬ್‌ನ ಮತದಾನ ಪ್ರಮಾಣ 70% ದಾಟುವಂತೆ ಗಿಲ್‌ ಸಾರ್ವಜನಿಕರಲ್ಲಿ ವೋಟಿಂಗ್ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply