ಭಾರತದಲ್ಲಿ ಭಯೋತ್ಪಾದನೆ ಹರಡಲು ಹುಡುಗಿಯರ ಮೊರೆ ಹೋದ ಪಾಕ್‌!

masthmagaa.com:

ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI, ಭಾರತದಲ್ಲಿ ಭಯೋತ್ಪಾದನೆ ಹರಡೋಕೆ ಬಾಲಕಿಯರು, ಮಹಿಳೆಯರು ಹಾಗೂ ಬಾಲಾಪರಾಧಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಸೇನಾ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್. ಅಮರ್ ದೀಪ್ ಸಿಂಗ್ ಇತ್ತೀಚಿಗೆ ನೀಡಿರುವ ಸಂದರ್ಶನದಲ್ಲಿ ಈ ಆಘಾತಕಾರಿ ಮಾಹಿತಿ ನೀಡಿದ್ದಾರೆ. ‘ಉಗ್ರ ಕೃತ್ಯಗಳನ್ನು ನಡೆಸೋಕೆ ಸಾಂಪ್ರದಾಯಿಕ ಸಂವಹನ ವಿಧಾನಗಳನ್ನ ಅಂದ್ರೆ ಮೊಬೈಲ್‌, ಇಂಟರ್‌ನೆಟ್, ಸಾಮಾಜಿಕ ಜಾಲತಾಣಗಳ ಬಳಕೆಗೆ ಐಎಸ್‌ಐ ಗುಡ್‌ ಬೈ ಹೇಳಿದೆ. ಅದರ ಬದಲಾಗಿ ಶಸ್ತಾಸ್ತ್ರಗಳ ಕಳ್ಳ ಸಾಗಣೆ, ಮಾದಕವಸ್ತುಗಳ ಸಾಗಾಟ, ಹಾಗೇ ಉಗ್ರ ಕೃತ್ಯಗಳಿಗೆ ಸಂದೇಶಗಳನ್ನ ಕಳುಹಿಸೋಕೆ ಮಹಿಳೆಯರು, ಹುಡುಗಿಯರು, ಬಾಲಾಪರಾಧಿಗಳನ್ನು ಬಳಕೆ ಮಾಡಲಾಗ್ತಿದೆ. ಕೆಲವು ಪ್ರಕರಣಗಳನ್ನು ಭೇದಿಸಿ, ತನಿಖೆ ನಡೆಸಿದ ಸಂದರ್ಭದಲ್ಲಿ ಈ ಅಂಶ ಬೆಳಕಿಗೆ ಬಂದಿದೆ’ ಅಂತ ಅಮರ್‌ದೀಪ್‌ ಸಿಂಗ್ ಹೇಳಿದ್ದಾರೆ. ಅಷ್ಟೇ ಅಲ್ಲ ಐಎಸ್‌ಐ ಜೊತೆಗೆ ಪಾಕ್ ಮೂಲದ ಉಗ್ರ ಸಂಘಟನೆಗಳ ಮುಖ್ಯಸ್ಥರೂ ಇದೇ ತಂತ್ರ ರೂಪಿಸ್ತಿದಾರೆ. ಈ ರೀತಿಯ ಭಯೋತ್ಪಾದನೆ ಅತ್ಯಂತ ಗಂಭೀರ ಹಾಗೂ ಕಳವಳಕಾರಿ, ಈ ಜಾಲವನ್ನು ಪತ್ತೆ ಹಚ್ಚಿ ಇಂಥ ಅಪಾಯಕಾರಿ ಟ್ರೆಂಡ್ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ತನಿಖಾ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ ಅಂತ ಅಮರ್‌ ದೀಪ್‌ ಸಿಂಗ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply