ರಿಲಾಯನ್ಸ್‌ ಜಿಯೋ ಭಾರತದ ಬಲಿಷ್ಠ ಬ್ರ್ಯಾಂಡ್‌: ಬ್ರ್ಯಾಂಡ್‌ ಫಿನಾನ್ಸ್‌

masthmagaa.com:

ಟೆಲಿಕಾಂ ಜಗತ್ತಲ್ಲಿ ಕ್ರಾಂತಿ ಸೃಷ್ಟಿಸಿದ ರಿಲಾಯನ್ಸ್‌ ಜಿಯೋ ಭಾರತದ strongest ಬ್ರ್ಯಾಂಡ್‌ ಆಗಿ ಹೊರಹೊಮ್ಮಿದೆ. ಆದ್ರೆ ಬ್ರ್ಯಾಂಡ್‌ ಮೌಲ್ಯದ ವಿಚಾರದಲ್ಲಿ ಟಾಟಾ ಭಾರತದ ನಂ.1 ಕಂಪನಿಯಾಗಿದೆ. ಜಾಗತಿಕ ಸಂಸ್ಥೆ ಬ್ರ್ಯಾಂಡ್‌ ಫಿನಾನ್ಸ್‌ ರಿಲೀಸ್‌ ಮಾಡಿದ ʻಗ್ಲೋಬಲ್‌-500ʼ ಪಟ್ಟಿಯಲ್ಲಿ ಈ ವಿಚಾರ ಗೊತ್ತಾಗಿದೆ. ಬ್ರ್ಯಾಂಡ್‌ ಮೌಲ್ಯದ ಅನುಸಾರವಾಗಿ ವಿಶ್ವದ 500 ಕಂಪನಿಗಳು ಈ ಪಟ್ಟಿಯಲ್ಲಿವೆ. ಅದ್ರಲ್ಲಿ ಟಾಟಾ ಜಾಗತಿಕವಾಗಿ 64ನೇ ಸ್ಥಾನದಲ್ಲಿದೆ. ಉಳಿದಂತೆ ಇಂಫೋಸಿಸ್‌ 145ನೇ ಸ್ಥಾನದಲ್ಲಿದೆ. ಆದ್ರೆ ಸ್ಟ್ರಾಂಗ್‌ ಬ್ರ್ಯಾಂಡ್‌ಗಳ ಲಿಸ್ಟ್‌ನಲ್ಲಿ ಜಿಯೋ ಜಾಗತಿಕವಾಗಿ 17ನೇ ಸ್ಥಾನ ಪಡೆದುಕೊಂಡಿದೆ. ಉಳಿದಂತೆ LIC 23ನೇ ಸ್ಥಾನದಲ್ಲಿ, SBI 24ನೇ ಸ್ಥಾನದಲ್ಲಿ ಇವೆ. ಇನ್ನು ಬ್ರ್ಯಾಂಡ್‌ ಮೌಲ್ಯದಲ್ಲಿ ಆ್ಯಪಲ್‌ ನಂ.1 ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಮೈಕ್ರೋಸಾಫ್ಟ್‌ ಹಾಗು ಗೂಗಲ್‌ ಇವೆ.

-masthmagaa.com

Contact Us for Advertisement

Leave a Reply