ವಂದೇ ಭಾರತ್‌ ದಾಖಲೆ: ಇದುವರೆಗೆ 2 ಕೋಟಿ ಪ್ರಯಾಣಿಕರಿಗೆ ಸೇವೆ!

masthmagaa.com:

ಭಾರತೀಯ ರೈಲ್ವೆ ಸೇವೆ ಶುರುವಾಗಿ ಇವತ್ತಿಗೆ 171 ವರ್ಷಗಳೇ ತುಂಬಿರೋ ಪ್ರಯುಕ್ತ ಇದೀಗ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಬಗ್ಗೆ ಹೊಸ ರಿಪೋರ್ಟ್‌ ಹೊರಬಿದ್ದಿದೆ. ಫೆಬ್ರುವರಿ 15, 2019ರಲ್ಲಿ ಪ್ರಾರಂಭಗೊಂಡಿರೋ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಟ್ರೈನ್‌ಗಳು ಮಾರ್ಚ್‌ 31ರವರೆಗೆ ಸುಮಾರು 2 ಕೋಟಿ ಪ್ಯಾಸೆಂಜರ್‌ಗಳಿಗೆ ಸೇವೆ ಸಲ್ಲಿಸಿದೆ. ಭಾರತೀಯ ರೈಲ್ವೆ ನೆಟ್‌ವರ್ಕ್‌ನ್ನ…ಆಧುನೀಕರಿಸಿದ ವ್ಯವಸ್ಥೆಯಾಗಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಪರಿವರ್ತಿಸಿದೆ. ಇಂದು ದೇಶದಲ್ಲಿ ಒಟ್ಟು 102 ವಂದೇ ಭಾರತ್‌ ಟ್ರೈನ್‌ಗಳು 100 ಬೇರೆ ಬೇರೆ ರೂಟ್‌ಗಳಲ್ಲಿ ಕಾರ್ಯಚರಿಸ್ತಿವೆ ಅಂತ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply