ಮ್ಯೂಚುವಲ್‌ ಫಂಡ್‌ಗಳಿಗೆ 35 ತಿಂಗಳುಗಳ ನಿರಂತರ ʻಇನ್‌ಫ್ಲೋʼ

masthmagaa.com:

ಜನವರಿ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಿಗೆ ₹21,749 ಕೋಟಿ ಹೂಡಿಕೆ ಬಂದಿದೆ. ಕಳೆದ ಡಿಸೆಂಬರ್‌ನಲ್ಲಿ ₹16,997 ಕೋಟಿ ಹೂಡಿಕೆ ಬಂದಿತ್ತು. ಆ ಮೂಲಕ ಕಳೆದ 35 ತಿಂಗಳಿನಲ್ಲಿ ಸತತವಾಗಿ ಮೂಚುವಲ್‌ ಫಂಡ್‌ಗಳ ಮೇಲೆ ಹೂಡಿಕೆ ಹರಿದು ಬಂದಿದೆ.. ಇನ್‌ಫ್ಲೋ ಆಗಿದೆ. ಅಸೋಸಿಯೇಶನ್‌ ಆಫ್‌ ಮ್ಯೂಚುವಲ್‌ ಫಂಡ್ಸ್‌ ಇನ್‌ ಇಂಡಿಯಾ(AMFI) ಈ ರಿಪೋರ್ಟನ್ನ ರಿಲೀಸ್‌ ಮಾಡಿದೆ. ಇದ್ರಲ್ಲಿ ಸ್ಮಾಲ್-ಕ್ಯಾಪ್‌ ಫಂಡ್‌ಗಳ ಮೇಲಿನ ಹೂಡಿಕೆ ಮಾತ್ರ ಸ್ವಲ್ಪ ಕಡಿಮೆ ಆಗಿ ಜನವರಿಯಲ್ಲಿ ₹3,257 ಕೋಟಿಗೆ ಇಳಿದಿದೆ. ಡಿಸೆಂಬರ್‌ನಲ್ಲಿ ₹3,857 ಕೋಟಿ ಹೂಡಿಕೆ ಹರಿದು ಬಂದಿತ್ತು. ಲಾರ್ಜ್‌ ಕ್ಯಾಪ್‌ ಫಂಡ್‌ಗಳಲ್ಲಿ ಡಿಸೆಂಬರ್‌ನಲ್ಲಿ ₹280.94 ಕೋಟಿ ಔಟ್‌ಫ್ಲೋ ಆಗಿತ್ತು. ಜನರು ಫಂಡ್ಸ್‌ ವಾಪಸ್‌ ತಗೊಂಡಿದ್ರು. ಆದ್ರೆ ಜನವರಿಯಲ್ಲಿ ಮತ್ತೆ ₹1,287.05 ಕೋಟಿ ಹೂಡಿಕೆ ಬಂದಿದೆ. ಇನ್ನು ಮಿಡ್‌ ಕ್ಯಾಪ್‌ ಫಂಡ್‌ಗಳಿಗೂ ಹೂಡಿಕೆ ಜಾಸ್ತಿಯಾಗಿ ₹2,061 ಕೋಟಿಗೆ ತಲುಪಿದೆ. ಉಳಿದಂತೆ ಎಕ್ಸ್‌ಚೇಂಜ್‌ ಟ್ರೇಟೆಡ್‌ ಫಂಡ್‌ (ETF) ಮೇಲಿನ ಹೂಡಿಕೆ ಏರಿಕೆಯಾಗಿ ₹571 ಕೋಟಿಗೆ ತಲುಪಿದೆ.

-masthmagaa.com

Contact Us for Advertisement

Leave a Reply