ದಾಳಿ ನಡೆಸೋದಾಗಿ ಹೇಳಿದ ಇಸ್ರೇಲ್‌! ಇರಾನ್‌ನಿಂದಲೂ ಎಚ್ಚರಿಕೆ!

masthmagaa.com:

ಇರಾನ್‌ ಮತ್ತು ಇಸ್ರೇಲ್‌ ನಡುವಿನ ಪ್ರತೀಕಾರದ ಕಿಚ್ಚು ದಿನದಿಂದ ದಿನಕ್ಕೆ ಕಾವೇರ್ತಿದೆ. ಇರಾನ್‌ ದಾಳಿಗೆ ಇಸ್ರೇಲ್‌ ಅದ್ಯಾವ್‌ ರೀತಿ ದಾಳಿ ಮಾಡಿ ಸೇಡು ತೀರಿಸಿಕೊಳ್ಳುತ್ತೋ ಅನ್ನೋ ಆತಂಕ ಇಡೀ ವಿಶ್ವವನ್ನೇ ಕಾಡ್ತಿದೆ. ಈ ಮಧ್ಯೆ ಇಸ್ರೇಲ್‌ನ ಸೇನಾ ಮುಖ್ಯಸ್ಥ ಹರ್ಜಿ ಹಲೇವಿ, ಇರಾನ್‌ಗೆ ಸರಿಯಾಗಿ ಪ್ರತಿಕ್ರಿಯೆ ನೀಡಿಯೇ ತೀರ್ತೀವಿ ಅಂತ ಅಬ್ಬರಿಸಿದ್ದಾರೆ. ʻಇಸ್ರೇಲ್‌ ಮೇಲೆ ಇರಾನ್‌ ನಡೆಸಿರೋ ಇಷ್ಟೊಂದು ಕ್ಷಿಪಣಿ ಮತ್ತು ಡ್ರೋನ್‌ ದಾಳಿಗೆ ಉತ್ತರ ನೀಡೇ ನೀಡ್ತೀವಿ. ಸದ್ಯ ನಮ್ಮ ಪ್ರಧಾನಿ ನೆತನ್ಯಾಹು ಅವ್ರ ನಿರ್ಧಾರಕ್ಕಾಗಿ ಕಾಯ್ತಿದ್ದೀವಿʼ ಅಂದಿದ್ದಾರೆ. ಸೋ…. ಇದೀಗ ಇಸ್ರೇಲ್‌ ಮೇಲೆ ಯುದ್ಧಸಾರಲು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಭಾರೀ ಒತ್ತಡ ಇದೆ ಅಂತ ಹೇಳಲಾಗ್ತಿದೆ. ಒಂದ್‌ ಕಡೆಯಿಂದ ಇಸ್ರೇಲ್‌ನ ಕೆಲ ಮಿತ್ರ ರಾಷ್ಟ್ರಗಳು ಸೇರಿ ಇರಾನ್‌ ಮೇಲೆ ದಾಳಿ ಮಾಡ್ಬೇಡಿ….ಸಂಘರ್ಷ ಜಾಸ್ತಿಯಾಗೋ ಹಾಗೇ ಮಾಡ್ಬೇಡಿ ಅಂತ ಒತ್ತಾಯಿಸ್ತಿವೆ. ಮತ್ತೊಂದ್ಕಡೆ ಇಸ್ರೇಲ್‌ನಲ್ಲಿ….ಇರಾನ್‌ ಮೇಲೆ ದಾಳಿ ಮಾಡಲೇಬೇಕು….ಪ್ರತೀಕಾರ ತೀರಿಸಿಕೊಳ್ಳಲೇಬೇಕು ಅಂತ ಆಗ್ರಹ ಮಾಡಲಾಗ್ತಿದೆ. ಆದ್ರೆ…ನೆತನ್ಯಾಹು ಮಾತ್ರ ದಾಳಿ ಮಾಡೋ ಬಗ್ಗೆ ಇದುವರೆಗೆ ಯಾವ್ದೇ ರೀತಿ ಹೇಳಿಕೆ ನೀಡಿಲ್ಲ…ಮೌನ ವಹಿಸಿದ್ದಾರೆ. ಆದ್ರೆ ಇಸ್ರೇಲ್‌ನ ಸೇನಾ ಮುಖ್ಯಸ್ಥ ಮಾತ್ರ ಪ್ರತೀಕಾರ ತೀರಿಸಿಕೊಳ್ಳೋದಾಗಿ ಹೇಳಿದ್ದಾರೆ. ಇದ್ರ ನಡುವೆಯೇ ಇಸ್ರೇಲ್‌ 48 ಗಂಟೆಗಳಲ್ಲಿ ನಾಲ್ಕು ಬಾರಿ ಸಭೆ ನಡೆಸಿದೆ.

ಈ ಬೆನ್ನಲ್ಲೇ ಇದೀಗ ಇರಾನ್‌ ಕೂಡ ಇಸ್ರೇಲ್‌ಗೆ ವಾರ್ನ್‌ ಮಾಡಿದೆ. ʻನೀವೇನಾದ್ರೂ ನಮ್ಮ ಮೇಲೆ ದಾಳಿ ಮಾಡಿದ್ರೆ…ನಾವು ಸುಮ್ಮನಿರಲ್ಲ. ಕೆಲವೇ ಸೆಕಂಡ್‌ಗಳಲ್ಲಿ ವಾಪಸ್‌ ದಾಳಿ ನಡೆಸ್ತೀವಿ. ಅದೂ ಕೂಡ ಹಿಂದೆಂದೂ ಬಳಸದ ಭಾರೀ ಶಸ್ತ್ರಾಸ್ತ್ರಗಳನ್ನ ಬಳಸ್ತೀವಿʼ ಅಂತ ಇರಾನ್‌ನ ಉಪ ವಿದೇಶಾಂಗ ಸಚಿವ ಅಲಿ ಬಘೇರಿ ಅವ್ರು ಇಸ್ರೇಲ್‌ಗೆ ಖಡಕ್‌ ಎಚ್ಚರಿಕೆ ರವಾನಿಸಿದ್ದಾರೆ.

ಇನ್ನು ಇಸ್ರೇಲ್‌ ಇರಾನ್‌ ಮೇಲೆ ದಾಳಿ ನಡೆಸೋ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಇರಾನ್‌ನ ನ್ಯೂಕ್ಲಿಯರ್‌ ಘಟಕಗಳ ಮೇಲೆ ಇಸ್ರೇಲ್‌ ಟಾರ್ಗೆಟ್‌ ಮಾಡಿ ದಾಳಿ ನಡೆಸ್ಬೋದು ಅಂತ ವಿಶ್ವಸಂಸ್ಥೆಯ ಪರಮಾಣು ಕಣ್ಗಾವಲು ಮುಖ್ಯಸ್ಥರು ಹೇಳಿದ್ದಾರೆ. ಅಂದ್ಹಾಗೆ ಭದ್ರತೆಗಾಗಿ ಏಪ್ರಿಲ್‌ 14ರಂದು ಇರಾನ್‌ನ ಈ ನ್ಯೂಕ್ಲಿಯರ್‌ ಘಟಕಗಳ ಮುಚ್ಚಲಾಗಿತ್ತು. ಆದ್ರೆ ಈಗ ಮತ್ತೆ ತೆರೆಯಲಾಗುತ್ತೆ ಅಂತ ಇರಾನ್‌ ಹೇಳಿದೆ.

ಇನ್ನೊಂದ್ಕಡೆ ಮಿಡಲ್‌ಈಸ್ಟ್‌ನಲ್ಲಿ ಉದ್ವಿಗ್ನತೆ ಹೆಚ್ಚಾಗ್ತಿದ್ದು, ಇದೀಗ ಅಮೆರಿಕದ ರಕ್ಷಣಾ ಸಲಹೆಗಾರ ಜೇಕ್‌ ಸುಲ್ಲಿವನ್‌ ತಮ್ಮ ಭಾರತ ಪ್ರವಾಸವನ್ನ ಕ್ಯಾನ್ಸೆಲ್‌ ಮಾಡಿದ್ದಾರೆ. ಭಾರತ ಪ್ರವಾಸವನ್ನ ಮುಂದೂಡಿದ ಅವ್ರು, iCET ಆನುವಲ್‌ ರಿವೀವ್‌ ಮೀಟಿಂಗ್‌ ನಡೆಸೋಕೆ ಆದಷ್ಟು ಬೇಗ ಡೇಟ್‌ ಫಿಕ್ಸ್‌ ಮಾಡೋದಾಗಿ ಹೇಳಿದ್ದಾರೆ.

ಇನ್ನು ಅತ್ತ ಇರಾನ್‌ ಲಾಂಚ್‌ ಮಾಡಿದ್ದ ನೂರಾರು ಕ್ಷಿಪಣಿ ಮತ್ತು ಡ್ರೋನ್‌ಗಳನ್ನ ಇಸ್ರೇಲ್‌ ಯಶಸ್ವಿಯಾಗಿ ಹೊಡೆದುರುಳಿಸಿದ ಕಾರ್ಯಚರಣೆಗೆ ಹೊಸ ಹೆಸರನ್ನ ಇಟ್ಟಿದೆ. ಸಕ್ಸೆಸ್‌ಫುಲ್‌ ಕಾರ್ಯಚರಣೆಗೆ ʻಐಯನ್‌ ಶೀಲ್ಡ್‌ʼ (Iron Shield) ಅಂತ ಇಸ್ರೇಲ್‌ನ ರಕ್ಷಣಾ ಪಡೆ ನಾಮಕರಣ ಮಾಡಿದೆ.

ಮತ್ತೊಂದ್ಕಡೆ ಇಸ್ರೇಲ್‌ ಮೇಲಿನ ಇರಾನ್‌ ದಾಳಿ ಖಂಡಿಸಿದ ಬ್ರಿಟನ್‌, ಫ್ರಾನ್ಸ್‌ ಮತ್ತು ಜರ್ಮನಿಯ ರಾಯಭಾರಿಗಳ ಮೇಲೆ ಇರಾನ್‌ ಸಿಡಿಮಿಡಿಗೊಂಡಿದೆ. ಇರಾನ್‌ನ ವಿದೇಶಾಂಗ ಸಚಿವಾಲಯ ಈ ಮೂರು ದೇಶಗಳ ರಾಯಭಾರಿಗಳಿಗೆ ಸಮನ್ಸ್‌ ನೀಡಿದೆ. ಅಷ್ಟೇ ಅಲ್ದೇ ಬ್ರಿಟನ್‌, ಫ್ರಾನ್ಸ್‌ ಮತ್ತು ಜರ್ಮನಿಯನ್ನ ಡಬಲ್‌ ಸ್ಟ್ಯಾಂಡರ್ಡ್ಸ್‌ ಅಂತ ಕರೆದಿದೆ.

-masthmagaa.com

Contact Us for Advertisement

Leave a Reply