ISRO: ರಾಕೆಟ್‌ ಇಂಜಿನ್‌ಗಳಿಗೆ ಕಡಿಮೆ ತೂಕದ ಕಾರ್ಬನ್‌ ಟು ಕಾರ್ಬನ್‌ ನಾಜಲ್‌

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆ ISRO ರಾಕೆಟ್‌ ಕ್ಷೇತ್ರದಲ್ಲಿ ಅತ್ಯಾಧುನಿಕ ಟೆಕ್ನಾಲಜಿಯೊಂದನ್ನ ಅಭಿವೃದ್ಧಿಪಡಿಸಿದೆ. ರಾಕೆಟ್‌ ಇಂಜಿನ್‌ಗಳಿಗೆ ಕಡಿಮೆ ತೂಕದ ಕಾರ್ಬನ್‌ ಟು ಕಾರ್ಬನ್‌ ನಾಜಲ್‌ನ್ನ ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ. ನಾಜಲ್‌ ಅಂದ್ರೆ ಇಂಜಿನ್‌ನ ಕೆಳಬಾಗದಲ್ಲಿ ಬರೋ ಉಪಕರಣ.. ವಾಹನಗಳಲ್ಲಿ ಎಕ್ಸಾಸ್ಟ್‌ ಇರೋ ರೀತಿ ರಾಕೆಟ್‌ನಲ್ಲಿ ನಾಜಲ್‌ ಇರುತ್ತೆ. ಕಡಿಮೆ ತೂಕದ ಈ ಹೊಸ ನಾಜಲ್‌ನಿಂದ ರಾಕೆಟ್‌ಗಳ ಪೇ ಲೋಡ್‌ ಕೆಪಾಸಿಟಿ ಇನ್ನೂ ಜಾಸ್ತಿಯಾಗಲಿದೆ. ಈ ಹಿಂದೆ ರಾಕೆಟ್‌ಗಳಲ್ಲಿ ಕೊಲಂಬಿಯನ್‌ ಅಲಾಯ್‌ನಿಂದ ಮಾಡಿದ ನಾಜಲ್‌ಗಳನ್ನ ಬಳಸಲಾಗ್ತಿತ್ತು. ಆದ್ರೆ ಕಾರ್ಬನ್-ಕಾರ್ಬನ್‌ ನಾಜಲ್‌ನಿಂದ 67% ತೂಕ ಕಡಿಮೆ ಆಗೋದ್ರ ಜೊತೆಗೆ ಇನ್ನೂ ಹಲವು ಉಪಯೋಗಗಳಿವೆ ಅಂತ ಇಸ್ರೋ ಹೇಳಿದೆ.

-masthmagaa.com

Contact Us for Advertisement

Leave a Reply